
ಇಸ್ಲಾಮಾಬಾದ್[ಅ.17]: ಶೀಘ್ರದಲ್ಲಿಯೇ ಪಾಕಿಸ್ತಾನ ಖರೀದಿಸುವ ಈ ಕ್ಷಿಪಣಿ ಭಾರತಕ್ಕೆ ಶಾಕ್ ಕೊಡಲಿದೆಯೇ. ಹೌದು ಎನ್ನುತ್ತಿವೆ ಮೂಲಗಳು.
ಚೀನಾದಿಂದ ಪಾಕ್ ಕೆಲವೇ ದಿನಗಳಲ್ಲಿ ಧ್ವನಿಯ ವೇಗವನ್ನು ಮೀರಿಸುವ ಹೆಚ್'ಡಿ 1 ಎನ್ನುವ ಕ್ಷಿಪಣಿಯನ್ನು ಖರೀದಿಸಲಿದ್ದು ಇದು ಭಾರತದ ಶಕ್ತಿಶಾಲಿ ಕ್ಷಿಪಣಿ ಬ್ರಹ್ಮೋಸ್ ಅನ್ನು ಮೀರಿಸಲಿದೆಯಂತೆ. ನೂತನ ಕ್ಷಿಪಣಿ ತಯಾರಿಕಾ ವೆಚ್ಚದಲ್ಲಿ ಬ್ರಹ್ಮೋಸ್'ಗಿಂತಲೂ ಹೆಚ್ಚಿದೆಯಂತೆ. ಚೀನಾ ಇತ್ತೀಚಿಗಷ್ಟೆ ಹೆಚ್'ಡಿ1 ಕ್ಷಿಪಣಿಯನ್ನು ಉಡಾಯಿಸಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು ಖಂಡಿತಾ ಸ್ಪರ್ಧೆ ನೀಡಲಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು. ಗುರಿ ಸೂಚನೆ, ನಿಯಂತ್ರಣ, ಆದೇಶ ಮುಂತಾದ ಸಮಗ್ರ ವ್ಯವಸ್ಥೆಯನ್ನು ಈ ಕ್ಷಿಪಣಿ ಹೊಂದಿದೆ.
ಬ್ರಹ್ಮೋಸ್ ಭಾರತ ಹಾಗೂ ರಷ್ಯಾದಿಂದ 5365 ಕೋಟಿ ರೂ. ವೆಚ್ಚದಲ್ಲಿ ತಯಾರಿತವಾಗಿದ್ದು 3 ಸಾವಿರ ಕೆಜಿ ತೂಕದ ಗಂಟೆಗೆ 3700 ಕಿ.ಮೀ ವೇಗದಲ್ಲಿ 400 ರಿಂದ 600 ಕಿ.ಮೀ ವರೆಗೂ ಗುರಿ ತಲುಪುತ್ತದೆ. ಇತ್ತೀಚಿನ ಕೆಲವು ವರ್ಷಗಳಿಂದ ಪಾಕಿಸ್ತಾನ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳು ಯುದ್ಧ ಶಸ್ತ್ರಾಸ್ತ್ರ ಖರೀದಿ, ತಯಾರಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿವೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.