ಹಫೀಜ್ ಸಯೀದ್ ‘ಉಗ್ರ’ನೆಂದು ಘೋಷಿಸಿದ ಪಾಕಿಸ್ತಾನ

By Suvarna Web DeskFirst Published Feb 13, 2018, 3:54 PM IST
Highlights
  • ಜಮಾತುದ್ದಾವ ಕಛೇರಿ ಮುಂಭಾಗದಲ್ಲಿ ಕಾರ್ಯಕರ್ತರು ಜೋಡಿಸಿದ್ದ ಬ್ಯಾರಿಕೇಡ್’ಗಳ ತೆರವು
  • ಉಗ್ರ ಸಂಘಟನೆಗಳನ್ನು ‘ಭಯೋತ್ಪಾದನೆ-ವಿರೋಧಿ ಕಾಯ್ದೆ-1997’ರ ವ್ಯಾಪ್ತಿಯಲ್ಲಿ ತರುವ  ಆಧ್ಯಾದೇಶಕ್ಕೆ ಅಧ್ಯಕ್ಷ ಮಮ್ನೂನ್ ಹುಸೇನ್ ಅಂಕಿತ

ನವದೆಹಲಿ: ಮುಂಬೈ 26/11 ದಾಳಿ ರೂವಾರಿ ಹಾಗೂ ಜಮಾತುದ್ದಾವ ಸಂಘಟನೆ ಮುಖ್ಯಸ್ಥ ಹಾಫಿಝ ಸಯೀದ್’ನನ್ನು ಪಾಕಿಸ್ತಾನವು ಉಗ್ರನೆಂದು ಘೋಷಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಜಮಾತುದ್ದಾವ ಕಛೇರಿ ಮುಂಭಾಗದಲ್ಲಿ ಕಾರ್ಯಕರ್ತರು ಜೋಡಿಸಿದ್ದ ಬ್ಯಾರಿಕೇಡ್’ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷೇಧಿಸಿರುವ, ಲಷ್ಕರೆ ತೈಬಾ, ಜಮಾತುದ್ದಾವಾ , ಹರ್ಕತುಲ್ ಮುಜಾಹೀದೀನ್’ಗಳಂಥ ಸಂಘಟನೆಗಳನ್ನು ‘ಭಯೋತ್ಪಾದನೆ-ವಿರೋಧಿ ಕಾಯ್ದೆ-1997’ರ ವ್ಯಾಪ್ತಿಯಲ್ಲಿ ತರುವ  ಆಧ್ಯಾದೇಶಕ್ಕೆ ಮಂಗಳವಾರ ಪಾಕಿಸ್ತಾನ ಅಧ್ಯಕ್ಷ ಮಮ್ನೂನ್ ಹುಸೇನ್ ಅಂಕಿತ ಹಾಕಿದ್ದಾರೆ.

ಹೊಸ ಆಧ್ಯಾದೇಶದ ಪ್ರಕಾರ, ಉಗ್ರ ಸಂಘಟನೆಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬಹುದಾಗಿದೆ.   

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಷೇಧಿಸಲ್ಪಟ್ಟ ಸಂಘಟನೆಗಳ ಪಟ್ಟಿಯಲ್ಲಿ 27 ಸಂಘಟನೆಗಳ ಹೆಸರಿದೆ.

 

 

    

 

 

 

 

 

 

 

click me!