
ಇಸ್ಲಮಾಬಾದ್(ನ.26): ಪಾಕಿಸ್ತಾನದಲ್ಲಿ ಸಾಮಾನ್ಯ ಜನ, ಸಲೀಸಾಗಿ ಓಡಾಡಲು ಸಾಧ್ಯವಿಲ್ಲದೇ ಇರಬಹುದು. ಆದರೆ, ಅದೇ ಪಾಕಿಸ್ತಾನದಲ್ಲಿ ಉಗ್ರರು, ತಾಲಿಬಾನಿಗಳು, ಅಂಡರ್ವರ್ಲ್ಡ್ ಡಾನ್ಗಳು ನಿರಾತಂಕವಾಗಿ ಬದುಕುತ್ತಿದ್ದಾರೆ. ಅದಕ್ಕೆ ಸಾಕ್ಷಿ ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ, ಝಕಿ-ಉರ್-ರೆಹಮಾನ್-ಲಖ್ವಿ. ಇವಱರಿಗೂ ಪಾಕ್ ನರಕವಲ್ಲ ಸ್ವರ್ಗ.
ಮುಂಬೈ ದಾಳಿ ನಡೆದು 8 ವರ್ಷಗಳಾಗಿವೆ ಪಾಕಿಸ್ತಾನವೇನಾದರೂ ಬದಲಾಗಿದೆಯಾ? ಇಲ್ಲಾ... ಅವರೇ ಸಾಕಿದ ಉಗ್ರರು, ಅವರದ್ದೇ ದೇಶದ ಮಕ್ಕಳನ್ನೂ ಬಿಡದೆ ಕೊಂದಿದ್ದಾರೆ. ಪಾಕ್ ಸರ್ಕಾರವೇನಾದರೂ ಎಚ್ಚೆತ್ತುಕೊಂಡಿದೆಯಾ ಅಂತಂದುಕೊಂಡರೆ ಅದೂ ಇಲ್ಲ. ಅಲ್ಲಿನ ಉಗ್ರರಿಗೆ ಯಾವ ತೊಂದರೆಯೂ ಮಾಡದೆ ರಕ್ಷಣೆ ನೀಡುತ್ತಿದೆ.
ದಾವೂದ್ ಇಬ್ರಾಹಿಂ ಈಗಲೂ C/0 ಕರಾಚಿ..!
1993ರಲ್ಲಿ ಮುಂಬೈನಲ್ಲಿ ಸರಣಿ ಸ್ಫೋಟ ನಡೆಸಿದವನು ದಾವೂದ್ ಇಬ್ರಾಹಿಂ. ಇವನು ಕೇವಲ ಸ್ಮಗ್ಲರ್ ಅಲ್ಲ ಹಫ್ತಾ ವಸೂಲಿ ಮಾಡುವ ಆರ್ಡಿನರಿ ಡಾನ್ ಅಲ್ಲ, ಡಿ ಕಂಪೆನಿ ಎನ್ನುವ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುತ್ತಿರುವ ಮೋಸ್ಟ್ ವಾಂಟೆಡ್ ಉಗ್ರ.
ಪಾಕಿಸ್ತಾನದ ಪ್ರತಿ ಉಗ್ರಗಾಮಿ ಸಂಘಟನೆಗಳ ಜೊತೆಯಲ್ಲೂ ದಾವೂದ್ ಲಿಂಕ್ ಇದೆ. ಡ್ರಗ್ಸ್ ಮಾಫಿಯಾವನ್ನು ದಾವೂದ್, ಕರಾಚಿಯಲ್ಲಿ ಕುಳಿತುಕೊಂಡೇ ನಡೆಸುತ್ತಾನೆ. ಆದರೆ, ಈತನನ್ನು ನಮಗೆ ಒಪ್ಪಿಸಿ ಎಂದು ಭಾರತ ಸಾಕ್ಷ್ಯ ಕೊಟ್ಟರೆ, ಪಾಕಿಸ್ತಾನ ಅದೆಲ್ಲ ಸುಳ್ಳು ಎಂದುಬಿಡುತ್ತಿದೆ. ಈತನ ರಕ್ಷಣೆಗೆ ನಿಂತಿರುವುದು ಪಾಕಿಸ್ತಾನದ ಐಎಸ್ಐ ಕಮಾಂಡೋಗಳು ಎಂದರೆ ನಂಬಲು ಸಾಧ್ಯಾನಾ?
ಪಾಕ್ ನೆಲದಲ್ಲಿ ಹಫೀಜ್ ಸಯೀದ್ ಭಯೋತ್ಪಾದನೆ ಭಾಷಣ
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಇ ಹಫೀಜ್ ಸಯೀದ್ ಈತ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಬರುತ್ತಾನೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಇವನೇ ಎಂದು ಯಾವ ಸಾಕ್ಷ್ಯಾಧಾರ ಕೊಟ್ಟರೂ ಪಾಕಿಸ್ಥಾನ ಹೇಳುವುದು ಒಂದೇ ಮಾತು ಅವನು ನಮ್ಮಲ್ಲಿ ಇಲ್ಲ ಎಂದು.
ಝಕಿ ಉರ್ ರೆಹಮಾನ್ ಲಖ್ವಿಗೆ ಜಾಮೀನಿನ ಉಡುಗೊರೆ
ಈತನನ್ನು ಯಾವ ನ್ಯಾಯಾಲಯ ಅಪರಾಧಿ ಎಂದು ಹೇಳಿತ್ತೋ ಅದೇ ನ್ಯಾಯಾಲಯ ಆತನಿಗೆ ಜಾಮೀನನ್ನೂ ಕೊಟ್ಟಿತ್ತು. ಪಾಕಿಸ್ತಾನದಲ್ಲಿ ಮದರಸಾ ಮೇಲೆ ದಾಳಿ ಮಾಡಿ ಪುಟ್ಟ ಪುಟ್ಟ ಮಕ್ಕಳನ್ನು ಕೊಂದವನು ಇದೇ ಲಖ್ವಿ ಎನ್ನುವ ಮಾತಿದೆ. ಏಕೆಂದರೆ, ಆ ದಾಳಿ ನಡೆದ ಎರಡೇ ದಿನಗಳಲ್ಲಿ ಜಾಮೀನು ನಿರಾಕರಿಸಿದ್ದ ನ್ಯಾಯಾಲಯವೇ ಜಾಮೀನು ಕೊಟ್ಟಿತ್ತು. ಇಂಥವರನ್ನೂ ಸಾಕಿಕೊಂಡಿರುವುದು ಇದೇ ಪಾಕಿಸ್ತಾನ.
ಅಂದಹಾಗೆ ಇವರೆಲ್ಲರೂ ಮುಂಬೈ ದಾಳಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪಾಲ್ಗೊಂಡಿದ್ದವರೇ ಇಂಥವರಿಗೆಲ್ಲ ಅನ್ನ, ನೀರು, ಜಾಗ ಕೊಟ್ಟು ಸಾಕುತ್ತಿರುವ ಪಾಕಿಸ್ತಾನವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.