ಬೆಂಗಳೂರಿನಲ್ಲಿ ಆಮ್ಲಜನಕದ ಕೊರತೆ ಭೀತಿ: ಕಬ್ಬನ್ ಪಾರ್ಕ್‌ನಲ್ಲಿ ಆಕ್ಸಿಜನ್ ಬಾರ್ ಡೆಮೋ

Published : Jun 04, 2017, 10:29 AM ISTUpdated : Apr 11, 2018, 01:13 PM IST
ಬೆಂಗಳೂರಿನಲ್ಲಿ ಆಮ್ಲಜನಕದ ಕೊರತೆ ಭೀತಿ: ಕಬ್ಬನ್ ಪಾರ್ಕ್‌ನಲ್ಲಿ ಆಕ್ಸಿಜನ್ ಬಾರ್ ಡೆಮೋ

ಸಾರಾಂಶ

ಗಾರ್ಡನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಆಮ್ಲಜನಕದ ಪ್ರಮಾಣ ಕಡಿಮೆಯಾಗ್ತಿದೆ.. ವಾಯು ಮಾಲಿನ್ಯ, ಹೆಚ್ಚುತ್ತಿರುವ ಉಷ್ಣತೆ, ಎಗ್ಗಿಲ್ಲದೆ ನಡೆಯುತ್ತಿರುವ ಮರಗಳ ಮಾರಣ ಹೋಮ ಇದೆಲ್ಲದರಿಂದಾಗಿ ಉತ್ತಮ ಆಮ್ಲಜನಕ ದೊರೆಯದೆ ಆಕ್ಸಿಜನ್ ಸೇವನೆ ಅನಿವಾರ್ಯದ ಸ್ಥಿತಿ ಎದುರಾಗಿದೆ. ಇದರಿಂದ ಆತಂಕಗೊಂಡ ಪರಿಸರವಾದಿಗಳು ಹಾಗೂ ಜಟ್ಕಾ ಡಾಟ್ ಆರ್ಗ್ ಎಂಬ ಸಂಸ್ಥೆ ಕಬ್ಬನ್ ಪಾರ್ಕ್ ನಲ್ಲಿ ಆಕ್ಸಿಜನ್ ಬಾರ್ ತೆರೆದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬೆಂಗಳೂರು(ಜೂ.04): ಗಾರ್ಡನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಆಮ್ಲಜನಕದ ಪ್ರಮಾಣ ಕಡಿಮೆಯಾಗ್ತಿದೆ.. ವಾಯು ಮಾಲಿನ್ಯ, ಹೆಚ್ಚುತ್ತಿರುವ ಉಷ್ಣತೆ, ಎಗ್ಗಿಲ್ಲದೆ ನಡೆಯುತ್ತಿರುವ ಮರಗಳ ಮಾರಣ ಹೋಮ ಇದೆಲ್ಲದರಿಂದಾಗಿ ಉತ್ತಮ ಆಮ್ಲಜನಕ ದೊರೆಯದೆ ಆಕ್ಸಿಜನ್ ಸೇವನೆ ಅನಿವಾರ್ಯದ ಸ್ಥಿತಿ ಎದುರಾಗಿದೆ. ಇದರಿಂದ ಆತಂಕಗೊಂಡ ಪರಿಸರವಾದಿಗಳು ಹಾಗೂ ಜಟ್ಕಾ ಡಾಟ್ ಆರ್ಗ್ ಎಂಬ ಸಂಸ್ಥೆ ಕಬ್ಬನ್ ಪಾರ್ಕ್ ನಲ್ಲಿ ಆಕ್ಸಿಜನ್ ಬಾರ್ ತೆರೆದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಇನ್ನೂ ದಿನದಿಂದ ದಿನಕ್ಕೆ ಮರಗಳ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಪರಿಸರ ತಜ್ಞರ ಪ್ರಕಾರ ನಗರದಲ್ಲಿ ಶೇ 33% ರಷ್ಟು ಹಸಿರು ಭಾಗ ಇರಬೇಕು. ಈ ಸಂಬಂಧ ಸಸಿಗಳ ನೆಡುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ನಗರದ ಜನರ ಸಹಿ ಸಂಗ್ರಹ ಮಾಡಲಾಯ್ತು. ಜೊತೆಗೆ ವಾರ್ಡ್ ಮಟ್ಟದಲ್ಲಿ ಹಸಿರು ಸಮಿತಿ  ರಚನೆಗೆ ಕೂಗು ಕೇಳಿಬಂದಿದೆ.

ಒಟ್ಟಾರೆ ಗಾರ್ಡನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಆಮ್ಲಜನಕದ ಕೊರತೆ ಭೀತಿ ಎದುರಾಗಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ಆಮ್ಲಜನಕವನ್ನು ಸೇವಿಸಬೇಕಾದೀತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ಕೋಟಿ ಮೌಲ್ಯದ ಆನ್‌ಲೈನ್ ವಂಚನೆ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಾಜಿ ಐಜಿ
ಬರೋಬ್ಬರಿ 6 ವರ್ಷಗಳ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಕಾಮರಾಜ್‌ ರಸ್ತೆ!