ಜಿಎಸ್'ಟಿ ಜುಲೈ 1ರಿಂದ ದೇಶಾದ್ಯಂತ ಜಾರಿ: ಯಾವುದಕ್ಕೆ ಎಷ್ಟು ತೆರಿಗೆ?

Published : Jun 04, 2017, 09:33 AM ISTUpdated : Apr 11, 2018, 01:02 PM IST
ಜಿಎಸ್'ಟಿ ಜುಲೈ 1ರಿಂದ ದೇಶಾದ್ಯಂತ ಜಾರಿ: ಯಾವುದಕ್ಕೆ ಎಷ್ಟು ತೆರಿಗೆ?

ಸಾರಾಂಶ

ಕೇಂದ್ರ ಸರ್ಕಾರವು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿರುವ ಜಿಎಸ್'ಟಿ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ದೇಶದಲ್ಲಿ ಇರೋ 21 ರೀತಿಯ ತೆರಿಗೆಗಳನ್ನು ನಿಷೇಧಿಸಲ್ಪಟ್ಟು, ಇನ್ನು ರಾಷ್ಟ್ರಾದ್ಯಂತ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಜಿಎಸ್​ಟಿಯಿಂದ ಯಾವುದು ದುಬಾರಿ ಆಗುತ್ತೆ, ಯಾವುದು ಅಗ್ಗ  ಎಂಬುದರ ಸರಳ ಮಾಹಿತಿ ಇಲ್ಲಿದೆ.

ನವದೆಹಲಿ(ಜೂ.04): ಕೇಂದ್ರ ಸರ್ಕಾರವು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿರುವ ಜಿಎಸ್'ಟಿ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ದೇಶದಲ್ಲಿ ಇರೋ 21 ರೀತಿಯ ತೆರಿಗೆಗಳನ್ನು ನಿಷೇಧಿಸಲ್ಪಟ್ಟು, ಇನ್ನು ರಾಷ್ಟ್ರಾದ್ಯಂತ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಜಿಎಸ್​ಟಿಯಿಂದ ಯಾವುದು ದುಬಾರಿ ಆಗುತ್ತೆ, ಯಾವುದು ಅಗ್ಗ  ಎಂಬುದರ ಸರಳ ಮಾಹಿತಿ ಇಲ್ಲಿದೆ.

ಜುಲೈ 1ಕ್ಕೆ ಜಿಎಸ್'ಟಿ  ಜಾರಿಗೆ ಬರುವುದು ಖಾತ್ರಿಯಾಗಿದೆ. ನಿನ್ನೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶ್ರೀನಗರದಲ್ಲಿ 15ನೇ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್ ಟಿ ಅಡಿಯಲ್ಲಿ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ.

ಶೂ, ತಾಜಾ ಮಾಂಸ, ಮೀನು, ಕೋಳಿಮಾಂಸ, ಮೊಟ್ಟೆ, ಹಾಲು, ಬೆಣ್ಣೆ, ಮೊಸರು, ಜೇನುತುಪ್ಪ, ಹಣ್ಣು ಮತ್ತು ತರಕಾರಿ, ಬ್ರೆಡ್​​, ದೇವರ ಪ್ರಸಾದ, ಉಪ್ಪು, ಕುಂಕುಮ, ಕಾನೂನಾತ್ಮಕ ಪೇಪರ್​​, ಮುದ್ರಣಗೊಂಡ ಪುಸ್ತಕ, ದಿನಪತ್ರಿಕೆ, ನಾರಿನ ಉತ್ಪನ್ನಗಳು, ಬಳೆ ಸೇರಿದಂತೆ ಇತರೆ ವಸ್ತುಗಳಿಗೆ ಮಾತ್ರ ತೆರಿಗೆಯಿಲ್ಲ.   

500 ರೂಪಾಯಿ ಒಳಗಿರುವ ಪಾದರಕ್ಷೆಗಳಿಗೆ ಶೇ. 5ರಷ್ಟು ಹಾಗೂ 500 ರೂ.ಗಳಿಗಿಂತ ಮೇಲ್ಪಟ್ಟ ಪಾದರಕ್ಷಗಳಿಗೆ ಶೇ. 18ರಷ್ಟು ತೆರಿಗೆ ನಿಗದಿ ಪಡಿಸಲಾಗಿದೆ. ಬಟ್ಟೆಗಳ ಮೇಲೆ ಶೇ. 12ರಷ್ಟು ತೆರಿಗೆ ಬೀಳುತ್ತದೆ. ಚಿನ್ನದ ಮೇಲೆ ಶೇ. 3ರಷ್ಟು, ಇತರೆ ಅಲಂಕಾರಿಕಾ ಹರಳುಗಳ ಮೇಲೂ ಶೇ. 3ರಷ್ಟು ತೆರಿಗೆ ಕಟ್ಟಬೇಕಾಗಿದೆ. ರಫ್ ಡೈಮೆಂಡ್'ಗಳ ಮೇಲೆ ಶೇ. 0.25ರಷ್ಟು ಸುಂಕ ವಿಧಿಸಲಾಗಿದೆ. ಪ್ಯಾಕೆಟ್ ಆಹಾರ ಉತ್ಪನ್ನಗಳಾದ ಬಿಸ್ಕತ್ ಗಳ ಮೇಲೆ ಶೇ 18ರಷ್ಟು ತೆರಿಗೆ ಬೀಳಲಿದೆ. ಇನ್ನು ಬೀಡಿ ಹಾಗೂ ಪಾನ್​ ಮಸಾಲ ಮೇಲೆ ಶೇ. 28ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ನಾಲ್ಕು ಮಾದರಿ  ಮಾಡಿಕೊಂಡು ವಿವಿಧ ಕ್ಷೇತ್ರಗಳಿಗೆ ತನ್ನದೇ ಮಾದರಿ ತೆರಿಗೆ ನಿಗದಿ ಮಾಡಿದೆ. ಜುಲೈ 1ರಿಂದ ದೇಶಾದ್ಯಂತ ಈ ತೆರಿಗೆ ಜಾರಿಗೆ ಬರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

70ರ ಹರೆಯದಲ್ಲಿ ಸಿಕ್ಕಿಂ ಸುಂದರಿಗೆ ಮನಸೋತ ಆನಂದ್ ಮಹೀಂದ್ರ,ಅವಳಂದಕ್ಕೆ ಕಳೆದುಹೋಗ್ತೀರಿ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌