ಗಂಡು, ಹೆಣ್ಣು ಮತ್ತು ತೃತೀಯ ಲಿಂಗಿಗಳಿಗೆ ಸಾಮಾನ್ಯವಾದ ಹೊಸ ಸರ್ವನಾಮ ಹುಟ್ಟುಹಾಕಿದ ಆಕ್ಸ್'ಫರ್ಡ್ ವಿವಿ

By Suvarna Web DeskFirst Published Dec 12, 2016, 2:57 PM IST
Highlights

ಈ ಪದ ಬಳಕೆಯನ್ನು ತೃತೀಯ ಲಿಂಗಿಗಳನ್ನುಉದ್ದೇಶಿಸಿ ಮಾತನಾಡುವಾಗ ಕಡ್ಡಾಯವಾಗಿ ...

ಲಂಡನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರತಿಷ್ಠಿತ ಆಕ್ಸ್'ಫರ್ಡ್ ವಿಶ್ವವಿದ್ಯಾಲಯವು ತೃತೀಯ ಲಿಂಗಿಗಳಿಗೆ ತಾರತಮ್ಯ ಆಗಬಾರದೆಂಬ ಉದ್ದೇಶದಿಂದ ಮೂರೂ ಲಿಂಗಿಗಳಿಗೆ ಸಾಮಾನ್ಯವಾದ ಒಂದು ಸರ್ವನಾಮವನ್ನು ಪ್ರಸ್ತಾಪಿಸಿದೆ. ಗಂಡು, ಹೆಣ್ಣು ಮತ್ತು ತೃತೀಯ ಲಿಂಗಿ ಹೀಗೆ ಮೂರು ವರ್ಗದವರನ್ನು ZE(ಝೀ) ಎಂದು ಸಂಬೋಧಿಸಬಹುದು ಎಂದು ವಿಶ್ವವಿದ್ಯಾಲಯವು ಪ್ರಕಟಣೆ ಹೊರಡಿಸಿದೆ. HE ಅಥವಾ SHE ಬದಲು ZE ಪದ ಬಳಸಿ ಸಂಬೋಧಿಸಿದರೆ ಯಾರಿಗೂ ಆಕ್ಷೇಪವಿರುವುದಿಲ್ಲ ಎಂದು ವಿವಿ ಅಭಿಪ್ರಾಯಪಟ್ಟಿದೆ. ತನ್ನ ಕ್ಯಾಂಪಸ್'ನಲ್ಲಿ ಈ ಹೊಸ ಪದ ಬಳಕೆಯಾಗಬೇಕೆಂದು ಕೋರಿಕೊಂಡಿದೆ.

ಆಕ್ಸ್'ಫರ್ಡ್ ವಿವಿಯ ಈ ನಿಲುವನ್ನು ತೃತೀಯ ಲಿಂಗಿಗಳು ಸ್ವಾಗತಿಸಿದ್ದಾರೆ. ಆದರೆ, ಈ ನಿಯಮವನ್ನು ಜನರ ಐಚ್ಛಿಕವಾಗಿಡಬೇಕೇ ಹೊರತು ಕಡ್ಡಾಯಗೊಳಿಸಬಾರದು ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಇದೇ ವೇಳೆ, ಆಕ್ಸ್'ಫರ್ಡ್ ನಿಲುವಿನಿಂದ ಪ್ರೇರಿತವಾದಂತಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಕೂಡ ತನ್ನ ಕ್ಯಾಂಪಸ್'ನಲ್ಲಿ ZE ಪದ ಬಳಕೆ ಮಾಡಲು ಮುಂದಾಗಿದೆ.

click me!