
ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನೆ ಮಾರಾಟಕ್ಕಿದೆ! ಹೌದು, ಎಚ್‌ಡಿಕೆ ಪಾಲಿಗೆ ಅದೃಷ್ಟದ ಮನೆಯೆಂದೇ ಬಿಂಬಿತವಾಗಿರುವ ಇಲ್ಲಿನ ಬೈರಿದೇವರಕೊಪ್ಪ ಮನೆ ಹಾಗೂ ಅದರ ಎದುರಿಗಿರುವ ಕಚೇರಿಯನ್ನು ಮನೆ ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಜಾಹೀರಾತನ್ನೂ ನೀಡಿದ್ದಾರೆ. ಕುಮಾರಸ್ವಾಮಿ ಪಾಲಿಗೆ ಲಕ್ಕಿಯಾಗಿ ಪರಿಣಮಿಸಿರುವ ಈ ಮನೆಯನ್ನು ಅವರೇ ಖರೀದಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟಿಸಬೇಕು ಎಂಬ ಇರಾದೆಯಿಂದ ಹುಬ್ಬಳ್ಳಿಯಲ್ಲಿ ಮನೆ ಮಾಡಲು2015 ರಲ್ಲೇ ಕುಮಾರಸ್ವಾಮಿ ನಿರ್ಧರಿಸಿದ್ದರು.
ಮುಖಂಡರು ಹತ್ತಾರು ಮನೆ ಹುಡುಕಿದ್ದರೂ ಯಾವ ಮನೆಯೂ ಕುಮಾರಸ್ವಾಮಿ ಅವರಿಗೆ ಇಷ್ಟವಾಗಿರಲಿಲ್ಲ. ಕೊನೆಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರ ಸಹೋದರ ಸುರೇಶ ರಾಯರಡ್ಡಿ ಅವರ ಬೈರಿದೇವರಕೊಪ್ಪದ ಮಾಯ್ಕರ ಕಾಲನಿಯಲ್ಲಿರುವ ಮನೆ ಇಷ್ಟವಾಗಿತ್ತು.10 ಸಾವಿರ ಚದರಡಿಯ 4 ಬೆಡ್ ರೂಮ್, ಪೂಜಾ ಕೋಣೆ, ಜಿಮ್ ಸೇರಿದಂತೆ ಸಕಲ ಸೌಕರ್ಯಗಳಿರುವ ಸುಸಜ್ಜಿತ ಮನೆ ಇದಾಗಿದೆ. ವಾಸ್ತು ಕೂಡ ಸರಿ ಇತ್ತ. ಈ ಹಿನ್ನೆಲೆಯಲ್ಲಿ ಈ ಮನೆಯನ್ನು ಬಾಡಿಗೆ ಹಿಡಿಯಲು ಎಚ್‌ಡಿಕೆ ಒಪ್ಪಿಗೆ ಸೂಚಿಸಿದ್ದರು. ಈ ಮನೆಗೆ ಸುರೇಶ ಅವರು ಬಾಡಿಗೆ ಸ್ವೀಕರಿಸಲು ನಿರಾಕರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.