1 ಲಕ್ಷ ಮಕ್ಕಳು ವಾಯುಮಾಲಿನ್ಯಕ್ಕೆ ಬಲಿ

By Web DeskFirst Published Oct 30, 2018, 11:15 AM IST
Highlights

ಭಾರತದಲ್ಲಿ ವಾಯುಮಾಲಿನ್ಯಕ್ಕೆ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಬಲಿ | ವಾಯುಮಾಲಿನ್ಯದಿಂದ 5 ವರ್ಷದ ಒಳಗಿನ ಮಕ್ಕಳ ಸಾವು ಭಾರತದಲ್ಲೇ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ

ನವದೆಹಲಿ (ಅ. 30):  ಭಾರತದಲ್ಲಿ ಐದು ವರ್ಷದ ಒಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ವಿಷಪೂರಿತ ಗಾಳಿಯ ಸೇವನೆಯಿಂದ 2016 ರಲ್ಲಿ ಸಾವನ್ನಪ್ಪಿದ್ದಾರೆ. ವಾಯುಮಾಲಿನ್ಯದಿಂದ 5 ವರ್ಷದ ಒಳಗಿನ ಮಕ್ಕಳ ಸಾವು ಭಾರತ ದಲ್ಲೇ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ವಾಯು ಮಾಲಿನ್ಯ ಮತ್ತು ಮಕ್ಕಳ ಆರೋಗ್ಯ ಕುರಿತ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಐದು ವರ್ಷದ ಒಳಗಿನ ಶೇ.೯೮ರಷ್ಟು ಮಕ್ಕಳು ಪಿಎಂ 2.5 ಸೂಕ್ಷ್ಮ ಕಣಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ವಾಯು ಮಾಲಿನ್ಯ 5 ವರ್ಷದ ಒಳಗಿನ ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 15 ವರ್ಷದ ಒಳಗಿನ 600,000 ಮಕ್ಕಳು ವಾಯು ಮಾಲಿನ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

click me!