ಗಡಿ ಬಳಿಯ ಪಾಕ್ ಸೇನಾ ಹೆಡ್ ಕ್ವಾರ್ಟರ್ ಉಡೀಸ್: ವಿಡಿಯೋ!

Published : Oct 30, 2018, 10:52 AM IST
ಗಡಿ ಬಳಿಯ ಪಾಕ್ ಸೇನಾ ಹೆಡ್ ಕ್ವಾರ್ಟರ್ ಉಡೀಸ್: ವಿಡಿಯೋ!

ಸಾರಾಂಶ

ಪಾಕ್ ಮೂತಿಗೆ ಮತ್ತೊಮ್ಮೆ ಗುದ್ದಿದ ಭಾರತೀಯ ಸೇನೆ! ಗಡಿ ನಿಯಂತ್ರಣ ರೇಖೆಯ ಪಾಕ್ ಸೇನಾ ಆಡಳಿತಾತ್ಮಕ ಕೇಂದ್ರ ಧ್ವಂಸ! ಪೂಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಕೇಂದ್ರ! ಪಾಕಿಸ್ತಾನ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯಿಂದ ದಿಟ್ಟ ಉತ್ತರ! ಒಳನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸೇನೆಯಿಂದ ಭಾರೀ ಪ್ರತಿರೋಧ

ಜಮ್ಮು(ಅ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯದ ಪೂಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ, ಪಾಕಿಸ್ತಾನದ ಸೇನಾ ಆಡಳಿತಾತ್ಮಕ ಕೇಂದ್ರ  ಕಚೇರಿ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.

ಅಕ್ಟೋಬರ್ 23 ರಂದು ಪೊಂಚ್ ಹಾಗೂ ಜಾಲ್ಹಾಸ್  ಬಳಿ  ಪಾಕಿಸ್ತಾನ ಶೆಲ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪಾಕಿಸ್ತಾನದಿಂದ ನಿರಂತರವಾಗಿ ಒಳನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆ ಗರಿಷ್ಠ ಪ್ರಮಾಣದಲ್ಲಿ ಪ್ರತಿರೋಧ ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಉರಿ ಮತ್ತು ನಾಗ್ರೋತಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ  2016 ಸೆಪ್ಟೆಂಬರ್ ತಿಂಗಳಲ್ಲಿ ಭಾರತ  ಸರ್ಜಿಕಲ್ ಸ್ಟ್ರೈಕ್ ನಡೆಸಿದ ಎರಡು ವರ್ಷದ ನಂತರ ಪಾಕ್ ಮೇಲೆ  ನಡೆಸಿರುವ ದೊಡ್ಡಮಟ್ಟದ ದಾಳಿ ಇದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Gadag: ಯುವತಿ ಮೇಲೆ ಆ್ಯಸಿಡ್ ದಾಳಿ ದಾಳಿಯ ವದಂತಿ; ಜನರಲ್ಲಿ ಆತಂಕ ಸೃಷ್ಟಿಸಿದ ಸ್ಫೋಟ, ಓರ್ವನ ಬಂಧನ
₹1000+ ಕೋಟಿ ಸೈಬರ್‌ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್‌ ಹೆಸರಲ್ಲಿ ಜಾಲ ಪತ್ತೆ