ಪಾಕ್ ಮಾಜಿ ಪ್ರಧಾನಿ, ಮಗಳು ಆರೋಪಿಗಳು ಎಂದ ಕೋರ್ಟ್

By Suvarna Web DeskFirst Published Oct 19, 2017, 5:51 PM IST
Highlights

ಷರೀಪ್ ಹಾಗೂ ಆತನ ಕುಟುಂಬ ಸದಸ್ಯರು ವಿದೇಶದಲ್ಲಿ ಕೊಟ್ಯಂತರ ಆಸ್ತಿ ಹೊಂದಿರುವುದಾಗಿ ಪನಾಮ ಸೋರಿಕೆಯಲ್ಲಿ ಬಹಿರಂಗವಾಗಿತ್ತು.

ಇಸ್ಲಾಮಾಬಾದ್(ಅ.19): ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಆತನ ಪುತ್ರಿ ಆರೋಪಿಗಳು ಎಂದಿರುವ ಪಾಕಿಸ್ತಾನಿ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಇಬ್ಬರ ವಿರುದ್ಧ ದೋಷಾರೋಪ ಪಟ್ಟಿ ಹೊರಿಸಿದೆ.

ಪನಾಮ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್, ಮಗಳು ಹಾಗೂ ಅಳಿಯನ ವಿರುದ್ಧ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರು ತಪ್ಪಿತಸ್ಥರು ಎಂದು ತಿಳಿಸಿದೆ

ತಾವು ತಪ್ಪಿತಸ್ಥರಲ್ಲ ತಮ್ಮ ವಿರುದ್ಧ ಇರುವ ಆರೋಪವನ್ನು ಪರಿಗಣಿಸದಂತೆ ಷರೀಫ್ ಅಳಿಯ ಮರಿಯಂ ಹಾಗೂ ಆಕೆಯ ಪ ಮೊಹಮದ್ ಸಾಫ್ದ್'ರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ಆದರೆ ಇವರ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಜುಲೈನಲ್ಲಿ ಅಘೋಷಿತ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಷರೀಫ್ ಅವರನ್ನು ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಿತ್ತು. ಆದರೆ ಷರೀಫ್ ದೇಶ ಬಿಟ್ಟು ತಲೆ ಮರೆಸಿಕೊಂಡಿದ್ದಾರೆ.

ಷರೀಪ್ ಹಾಗೂ ಆತನ ಕುಟುಂಬ ಸದಸ್ಯರು ವಿದೇಶದಲ್ಲಿ ಕೊಟ್ಯಂತರ ಆಸ್ತಿ ಹೊಂದಿರುವುದಾಗಿ ಪನಾಮ ಸೋರಿಕೆಯಲ್ಲಿ ಬಹಿರಂಗವಾಗಿತ್ತು. ಆದರೆ ಇವರ್ಯಾರು ಆರೋಪವನ್ನು ಒಪ್ಪಿಕೊಳ್ಳದೆ ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಹೇಳುತ್ತಾ ಬಂದಿದ್ದಾರೆ.  

click me!