
ಕಾನ್ಪುರ (ಡಿ.19): ಸಂಸತ್ತು ಕಲಾಪಗಳು ನಡೆಯದಿರುವುದಕ್ಕೆ ಪ್ರತಿಪಕ್ಷಗಳನ್ನು ದೂಷಿಸಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರವು ಕಪ್ಪುಹಣವನ್ನು ನಿಯಂತ್ರಿಸಬಯಸುತ್ತದೆ, ಆದರೆ ವಿಪಕ್ಷಗಳು ಸಂಸತ್ತನ್ನು ಮುಚ್ಚಬಯಸುತ್ತವೆ ಎಂದು ಹರಿಹಾಯ್ದಿದ್ದಾರೆ.
ಕಾನ್ಪುರದಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಕೆಲ ಭ್ರಷ್ಟಜನರನ್ನು ರಕ್ಷಿಸಲು ಸಂಸತ್ತಿನಲ್ಲಿ ಘೋಷಣೆ ಕೂಗಲಾಗಿರುವುದು ಇದೇ ಮೊದಲ ಬಾರಿ. ಸರ್ಕಾರವು ಕಪ್ಪು ಹಣವನ್ನು ಮುಗಿಸಬಯಸಿದರೆ, ಪ್ರತಿಪಕ್ಷಗಳು ಸಂಸತ್ತನ್ನು ಮುಚ್ಚ ಬಯಸುತ್ತಿವೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ದೇಶವು ಈಗ ಎರಡು ವಿಭಾಗದಲ್ಲಿ ಹಂಚಿಹೋಗಿದೆ, ಕಪ್ಪುಹಣ, ಭ್ರಷ್ಟಾಚಾರ ಹಾಗೂ ಅಪ್ರಾಮಾಣಿಕತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಜಕೀಯ ನಾಯಕರ ವರ್ಗ ಒಂದೆಡೆಯಾದರೆ, ಇನ್ನೊಂದೆಡೆ ಪ್ರಾಮಾಣಿಕತೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ಜನತೆ ಇದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.