ಬಿಜೆಪಿ ಮಣಿಸಲು ಪ್ರತಿಪಕ್ಷಗಳ ಒಗ್ಗಟ್ಟು

First Published May 6, 2018, 12:50 PM IST
Highlights

ಮೇ 29ರಂದು ನಿಗದಿಯಾಗಿರುವ ಕೈರಾನಾ ಲೋಕಸಭಾ ಮತ್ತು ನೂರ್ಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳೆಲ್ಲವೂ ಕೂಡ ಒಂದಾಗಲು ನಿರ್ಧಾರ ಮಾಡಿಕೊಂಡಿವೆ.

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಅವರಿಂದ ತೆರವಾದ ಗೋರಖ್‌ಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಎಸ್ ಪಿ-ಎಸ್‌ಪಿ ಮೈತ್ರಿ ಭರ್ಜರಿ ಫಲ ಕೊಟ್ಟಿತ್ತು.

ಈ ಹಿನ್ನೆಲೆಯಲ್ಲಿ ಇದೇ ರೀತಿಯಾಗಿ ಮೇ 29ರಂದು ನಿಗದಿಯಾಗಿರುವ ಕೈರಾನಾ ಲೋಕಸಭಾ ಮತ್ತು ನೂರ್ಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ವಿರು ದ್ಧದ ಪಕ್ಷಗಳ ಜತೆ ಕೈ ಜೋಡಿಸುವುದಾಗಿ ರಾಷ್ಟ್ರೀಯ ಲೋಕದಳ(ಆರ್ ಎಲ್‌ಡಿ) ತಿಳಿಸಿದೆ.

ಪ್ರತಿಪಕ್ಷಗಳ ಜತೆಗಿನ ಮೈತ್ರಿ ಸಂಬಂಧ ಆರ್‌ಎಲ್‌ಡಿ ಉಪಾಧ್ಯಕ್ಷ ಜಯಂತ್ ಚೌಧರಿ ಅವರು, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಸುಮಾರು 3 ಗಂಟೆಗಳ ಕಾಲ ಸಮಾಲೋಚನೆ ನಡೆಸಿ ದ್ದಾರೆ.

ಈ ಸಂದರ್ಭದಲ್ಲಿ ಮುಂಬರುವ 2019 ರ ಲೋಕಸಭಾ ಚುನಾವ ಣೆಯಲ್ಲಿ ಎಲ್ಲ ಪ್ರತಿಪಕ್ಷಗಳು ಜತೆಗೂಡಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಎಲ್‌ಡಿ ವಕ್ತಾರ ಅನಿಲ್ ದುಬೆ ತಿಳಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಶವ ಪ್ರಸಾದ್ ಮೌರ್ಯ ಅವರಿಂದ ತೆರವಾಗಿದ್ದ ಗೋರಖ್‌ಪುರ ಮತ್ತು ಫೂಲ್ಪುರದ ಪ್ರತಿಷ್ಠಿತ ಲೋಕಸಭಾ ಚುನಾವಣೆಗಳಲ್ಲಿ ಬಿಎಸ್‌ಪಿ ಮೈತ್ರಿ ಯಿಂದಾಗಿ ಎಸ್‌ಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದರು.

click me!