
ಚೆನ್ನೈ(ಅ.10): ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೆ ಇಂದು ಅಪೋಲೋ ಆಸ್ಪತ್ರೆಯಲ್ಲಿ ಸಣ್ಣದಾದ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಜಯಾಗೆ ಇನ್ನೂ ಸ್ವಲ್ಪ ದಿನ ವೆಂಟಿಲೇಟರ್ ಅಗತ್ಯವಿದ್ದು, ಗಂಟಲು ಮುಖಾಂತರ ಟ್ರಾಸ್ಕೋಟಾಮಿ ಮಾಡಿ ವೆಂಟಿಲೇಟರ್ ಆಳವಡಿಸುವುದು ಈಗ ಆವಶ್ಯಕತೆಯಿದೆ. ಹೀಗಾಗಿ ಇಂದು ಅಮ್ಮನಿಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆಯಲಿದೆ.
ಟ್ರಾಸ್ಕೋಟಾಮಿ ಮಾಡುವ ಮೂಲಕ ಹೊಸ ವೆಂಟಿಲೇಟರ್ ಆಳವಡಿಕೆ
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾಗೆ ಇಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿಂದು ಸಣ್ಣ ಆಪರೇಷನ್ ನಡೆಯಲಿದೆ. ಬಾಯಿಯ ಮೂಲಕ ಅಮ್ಮನಿಗೆ ವೆಂಟಿಲೇಟರ್ ಆಳವಡಿಸಿರುವ ಅಪೋಲೋ ವೈದ್ಯರು, ಇದು ಇನ್ಮುಂದೆ ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಅಮ್ಮನಿಗೆ ಟ್ರಾಸ್ಕೋಟಾಮಿ ಮಾಡಿ, ಗಂಟಲು ಭಾಗದಿಂದ ಹೊಸ ಪೈಪ್ ಅಳವಡಿಸಿ, ಅದರ ಮೂಲಕ ಉಸಿರಾಡಲು ಅನುವು ಮಾಡಿಕೊಡಲಿದ್ದಾರೆ. ಇನ್ನು ಗಂಟಲಿನ ಪಕ್ಕದಲ್ಲಿ ಹೊಸ ಪೈಪ್ ಆಳವಡಿಕೆ ಮಾಡಿದ್ರೆ, ಉಸಿರಾಟವನ್ನು ಅಮ್ಮ ಗಂಟಲಿನಿಂದಲೇ ಮಾಡಬೇಕಾಗಿದೆ.
ಆಪರೇಷನ್ನನ್ನು ಅಪೋಲೋ ವೈದ್ಯರ ತಂಡದ ದೆಹಲಿಯ ಏಮ್ಸ್ ವೈದ್ಯರ ಸಹಾಯದೊಂದಿಗೆ ಮಾಡುತ್ತಿದ್ದಾರೆ. ಇನ್ನು ನಿನ್ನೆ ಜಯಲಲಿತಾ ಅವರನ್ನು ನೋಡಲು ಕೇರಳ ಮುಖ್ಯಮಂತ್ರಿ ಕೂಡಾಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನೊಂದೆಡೆ ಟ್ರಾಸ್ಕೋಟಾಮಿ ಮಾಡಿದ್ರೆ ಸದ್ಯದ ಮಟ್ಟಿಗೆ ಯಾವುದೇ ತೊಂದರೆಯಾಗೋಲ್ಲ ಎಂಬುದು ತಿಳಿದು ಬಂದಿದ್ರೂ, ಟ್ರಾಸ್ಕೋಟಾಮಿಯಿಂದ ಹೆಚ್ಚಿನ ದಿವಸ ವ್ಯಕ್ತಿ ಉಸಿರಾಡಲು ಸಾಧ್ಯವಿಲ್ಲ ಎಂಬುದು ವೈದ್ಯರ ಅಭಿಪ್ರಾಯ. ಹೀಗಾಗಿ ಆದಷ್ಟು ಬೇಗ ಜಯಾ ಆರೋಗ್ಯದಲ್ಲಿ ಚೇತರಿಸಿಕೊಳ್ಳಲೇ ಅನಿವಾರ್ಯತೆ ಈಗ ಎದುರಾಗಿದೆ
ಅಮ್ಮನಿಗೆ ಕೇವಲ ವೆಂಟಿಲೇಟರ್ ಅಳವಡಿಕೆ ಮಾಡಿದ್ದು, ಬೇರೆ ಬೇರೆ ಸಮಸ್ಯೆಗಳಿಗೆ ಬೇರೆ ಬೇರೆ ತರಹದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಟ್ರಾಸ್ಕೋಟಾಮಿ ಮಾಡುವ ಮೂಲಕ ವೈದ್ಯರು ಹೊಸ ಪೈಪ್ ಆಳವಡಿಕೆ ಮಾಡಿ, ಉಸಿರಾಟ ಸರಾಗವಾಗುವಂತೆ ನೋಡಿಕೊಳ್ಳಲಿದ್ದಾರೆ. ಆದರೆ ಈ ಟ್ರಾಸ್ಕೋಟಾಮಿ ಅಮ್ಮನ ಜೀವವನ್ನು ಎಷ್ಟು ದಿವಸ ಕಾಪಾಡುತ್ತೋ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.