
ಮೈಸೂರು (ಅ.10): ವಿಶ್ವವಿಖ್ಯಾತ ಮೈಸೂರು ಅರಮನೆ, ಎಲ್ಲೆಲ್ಲೂ ಖಾಕಿ ಪಡೆಯ ಬಂದೋಬಸ್ತ್ ಇದೆ. ಶಸ್ತ್ರ ಸಜ್ಜಿತ ಪೊಲೀಸರು ಸದಾ ಕಾವಲು ಕಾಯುತ್ತಿರುವ ಅತೀ ಮುಖ್ಯವಾದ ಜಾಗ ಅದು. ಅಲ್ಲಿಗೆ ಯಾರೊಬ್ಬರು ಅನುಮತಿ ಇಲ್ಲದೆ ಹೋಗಲು ಸಾಧ್ಯವಿಲ್ಲ ಅಂತ ನೀವು ತಿಳಿದುಕೊಂಡಿದ್ದರೆ ಅದು ತಪ್ಪು!!!
ಮೈಸೂರು ಅರಮನೆಯ ಕೋಟೆಯೊಳಗೆ ನುಸುಳುವುದು ಕಳ್ಳ ಕಾಕರಿಗೆ ನೀರು ಕುಡಿದಷ್ಟೇ ಸುಲಭ. ಮುಖ್ಯಧ್ವಾರದಲ್ಲಿ ಪ್ರವೇಶ ಮಾಡಲು ಅನುಮತಿ ಸಿಗದ ವ್ಯಾಪಾರಿಗಳು ಅರಮನೆ ಒಳಗೆ ವ್ಯಾಪಾರ ಮಾಡಲು ಕೋಟೆಯಲ್ಲೇ ಕಳ್ಳ ದಾರಿ ಹುಡುಕಿದ್ದಾರೆ!!!
ಕೋಟೆ ಮಾರಮ್ಮ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಕೋಟೆಗೆ ರಂಧ್ರಗಳನ್ನು ಮಾಡಿ ಅಲ್ಲಿಂದ ಒಳಗಡೆಗೆ ವ್ಯಾಪಾರದ ಪದಾರ್ಥಗಳನ್ನು ಸಾಗಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಿಂದಲೂ ಈ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇದು ಹೀಗೇ ಮುಂದುವರೆದು ಅರಮೆನೆಯೊಳಗೆ ಭಯೋತ್ಪಾದಕರು ನುಗ್ಗಿದರೆ ಏನು ಮಾಡುವುದು ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.