ಬಿಎಸ್‌ವೈ VS ಕುಮಾರಸ್ವಾಮಿ-ಬೆಂಕಿ ಮತ್ತು ಬಿರುಗಾಳಿ

Published : Sep 20, 2018, 12:35 PM ISTUpdated : Sep 20, 2018, 03:40 PM IST
ಬಿಎಸ್‌ವೈ VS ಕುಮಾರಸ್ವಾಮಿ-ಬೆಂಕಿ ಮತ್ತು ಬಿರುಗಾಳಿ

ಸಾರಾಂಶ

ಒಂದು ಕಡೆ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ಮಾಡಿದ ಕೆಲವೆ ಕ್ಷಣದಲ್ಲಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗೆ ಇಲ್ಲ. ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಮೊದಲು ಉತ್ತರ ನೀಡಿ ಎಂದು ಯಡಿಯೂರಪ್ಪ ಕುಮಾರಸ್ವಾಮಿಗೆ ಪ್ರತಿ ಸವಾಲು ಹಾಕಿದ್ದಾರೆ.  

ಬೆಂಗಳೂರು[ಸೆ.20] ಒಂದು ಕಾಲದಲ್ಲಿ ಒಟ್ಟಾಗಿ ಸರಕಾರ ಮಾಡಿದ್ದ ಬಿಎಸ್‌ ವೈ ಮತ್ತು ಕುಮಾರಸ್ವಾಮಿ ಇದೀಗ ಬೆಂಕಿ ಬಿರುಗಾಳಿಯಾಗಿದ್ದಾರೆ. ನಿಮ್ಮ ಬಳಿ ಅಧಿಕಾರವಿದೆ ಎಂದು ಸಲ್ಲದ ತನಿಖೆ ಮಾಡುತ್ತೀರಾ? ಮಾಡಿ ನಮ್ಮ ಬಳಿಯೂ ಸರಕಾರವಿದೆ. ಕೇಂದ್ರದಲ್ಲಿ ನಾವೇ ಅಧಿಕಾರದಲ್ಲಿದ್ದೇವೆ ನೆನಪಿರಲಿ ಎಂದಿದ್ದಾರೆ.

ಮಧ್ಯಾಹ್ನ 4 ಗಂಟೆಗೆ ತುರ್ತು ಪತ್ರಿಕಾ ಗೋಷ್ಠಿ ನಡೆಸಲಿರುವ ಬಿಎಸ್‌ ವೈ ಇನ್ನಷ್ಟು ಮಾಹಿತಿ ಬಹಿರಂಗ ಮಾಡಲಿದ್ದಾರೆ. ಮಾತನಾಡುವ ನೈತಿಕತೆ ಇರದ ಕುಮಾರಸ್ವಾಮಿ ಆರೋಪಗಳಿಗೆ  ಉತ್ತರ ನೀಡಲೇಬೇಕಾಗಿಲ್ಲ. ಶಿವರಾಮ ಕಾರಂತ ಬಡಾವಾಣೆ ವಿಚಾರ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರಲ್ಲ ಎಂದಿದ್ದಾರೆ. ನಿಮ್ಮ ಕುಟುಂಬ ಮಾಡಿದಷ್ಟು ದ್ರೋಹ, ಈ ಸೇಡಿನ ರಾಜಕಾರಣ ಬಹಳ ಕಾಲ ನಡೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯ ರಾಜಕಾರಣದಕಲ್ಲಿ ಬಿರುಸಿನ ಚಟುವಟಿಕೆ ಮತ್ತಷ್ಟು ಜೋರಾಗಿದೆ. ಇನ್ನೊಂದು ಕಡೆ 22 ಶಾಸಕರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದ್ದು ಮೈತ್ರಿ ಸರಕಾರದ ಭವಿಷ್ಯ ನಿರ್ಧಾರವಾಗಲಿದೆಯೇ? ಎಂಬ ಪ್ರಶ್ನೆ ಸಹ ಮೂಡಿದೆ.

"

 

"

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ