ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಆಪರೇಷನ್ ಕಮಲದ ಬಗ್ಗೆ ಮಹತ್ವದ ಸುಳಿವು ನೀಡಿದ್ದು, ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲ ಮತ್ತೆ ಮುನ್ನೆಲೆಗೆ ಬಂತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಬಳ್ಳಾರಿ, [ಜೂ.16]: ಆಪರೇಷನ್ ಕಮಲ ಇನ್ನು ಜಾರಿಯಲ್ಲಿದ್ದು, ಅದು ಬಳ್ಳಾರಿಯಿಂದಲೇ ಆರಂಭವಾಗುತ್ತದೆ ನೋಡ್ತಾ ಇರಿ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು [ಭಾನುವಾರ] ಬಳ್ಳಾರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡರಲ್ಲೂ ಅತೃಪ್ತಿ ಇದೆ. ಕಾಯ್ತಾ ಇರಿ ಆಪರೇಷನ್ ಕಮಲ ಬಳ್ಳಾರಿಯಿಂದಲೇ ಆರಂಭವಾಗುತ್ತದೆ ಎಂದು ಈಶ್ವರಪ್ಪ ಅವರು ಆಪರೇಷನ್ ಕಮಲದ ಸುಳಿವು ನೀಡಿದರು.
undefined
ಕಾಂಗ್ರೆಸ್ ಶಾಸಕರುಗಳಿಗೆ ಅತೃಪ್ತಿ ಇದ್ದು, ಅದನ್ನು ನೇರವಾಗಿ ಹೊರ ಹಾಕುತ್ತಿದ್ದಾರೆ. ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿದ್ದು ಒಳ್ಳೆಯದಲ್ಲ ಎಂದು ಕೆಲ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕ್ತಿದ್ದಾರೆ ಎಂದರು.
ಈಶ್ವರಪ್ಪ ಅವರ ಈ ಹೇಳಿಕೆಯನ್ನು ಗಮನಿಸಿದರೆ, ರಾಜ್ಯ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಒಳಗೆ ಸಂಚು ರೂಪಿಸುತ್ತಿದ್ಯಾ ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಳ್ಳಾರಿಯಿಂದಲೇ ಆಪರೇಷನ್ ಆರಂಭ ಅಂದ್ರೆ ನಾಗೇಂದ್ರ ಅವರಿಗೆ ಬಿಜೆಪಿ ಗಾಳ ಹಾಕಿರುವ ಸಾಧ್ಯತೆಗಳಿವೆ. ಯಾಕಂದ್ರೆ ಬಳ್ಳಾರಿಯಲ್ಲಿ ನಾಗೇಂದ್ರ ಮಾತ್ರ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ.