‘ಕೈ’ಬಿಟ್ಟ ನಾಯಕನಿಗೆ ಸಚಿವ ಸ್ಥಾನ: ವಿಖೆ ಪಾಟೀಲ್ ತೆರೆದ ಫಡ್ನವೀಸ್ ಆಸ್ಥಾನ!

By Web DeskFirst Published Jun 16, 2019, 5:34 PM IST
Highlights

ಕಾಂಗ್ರೆಸ್ ತೊರೆದ ನಾಯಕನಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ| ಸಚಿವರಾಗಿ ಹಿರಿಯ ನಾಯಕ ವಿಖೆ ಪಾಟೀಲ್ ಅಧಿಕಾರ ಸ್ವೀಕಾರ| ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಸಚಿವರಾದ ವಿಖೆ ಪಾಟೀಲ್| ಫಡ್ನವೀಸ್ ಸಂಪುಟ ವಿಸ್ತರಣೆ ಯಶಸ್ವಿ| 

ಮುಂಬೈ(ಜೂ.16): ಇತ್ತಿಚೀಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಖೆ ಪಾಟೀಲ್ ಮತ್ತು ಮುಂಬೈ ಆಶೀಶ್ ಶೇಲರ್ ಸೇರಿದಂತೆ ಒಟ್ಸಟು 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಸಿಎಂ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು.

Maharashtra cabinet expansion: Radhakrishna Vikhe Patil & Ashish Shelar take oath as ministers, in presence of CM Devendra Fadnavis in Mumbai. pic.twitter.com/5zurqMZOp3

— ANI (@ANI)

ಮಹಾರಾಷ್ಟ್ರದ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರದ ಸಂಪುಟ ಬದಲಾವಣೆ ಮತ್ತು ವಿಸ್ತರಣೆಗೆ ಮುಂದಾಗಿದ್ದು, ಈಗಾಗಲೇ ವಸತಿ ಸಚಿವ ಪ್ರಕಾಶ್ ಮೆಹ್ತಾ ಸೇರಿದಂತೆ 6 ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

click me!