ಬಿಜೆಪಿಗೆ ಕಾಂಗ್ರೆಸಿನ 6 ಶಾಸಕರು?

Published : Dec 15, 2018, 10:17 AM IST
ಬಿಜೆಪಿಗೆ ಕಾಂಗ್ರೆಸಿನ 6 ಶಾಸಕರು?

ಸಾರಾಂಶ

ಮೊದಲ ಬಾರಿ ಕಾಂಗ್ರೆಸಿನಲ್ಲಿ ಬಹಿರಂಗ ಗುಂಪುಗಾರಿಕೆ ಆರಂಭವಾಗಿದ್ದು, 5 ರಿಂದ 6 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ. 

ಬೆಳಗಾವಿ :  ಒಂದು ಕಡೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆರಂಭವಾಗುತ್ತಿದ್ದಂತೆಯೇ ‘ಆಪರೇಷನ್‌ ಕಮಲ’ದ ಭೀತಿ ಮತ್ತೆ ಪಕ್ಷವನ್ನು ಕಾಡಿದೆ.

ಸಂಪುಟ ವಿಸ್ತರಣೆ ಗೊಂದಲದ ಜತೆಗೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಅಳಲು ಕೂಡ ಕಾಂಗ್ರೆಸ್‌ನಲ್ಲಿ ಆರಂಭವಾಗಿರುವುದು ಆಪರೇಷನ್‌ ಕಮಲಕ್ಕೆ ಇಂಬು ನೀಡಿದ್ದು, ಇಂತಹದೊಂದು ಪ್ರಯತ್ನ ತೆರೆಮರೆಯಲ್ಲಿ ಸಾಗಿದೆ ಎಂಬ ಗುಲ್ಲು ಹಬ್ಬಿದೆ. ಬಿಜೆಪಿಯ ಆಮಿಷಕ್ಕೆ ಒಳಗಾಗಿ ಆ ಪಕ್ಷದ ಸಂಜ್ಞೆಗಾಗಿ ಕಾದು ಕುಳಿತಿರುವ ಸುಮಾರು ಐದಾರು ಮಂದಿ ಶಾಸಕರು ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಸರ್ಕಾರವನ್ನು ಅಸ್ಥಿರಗೊಳಿಸುವಷ್ಟುಸಂಖ್ಯೆ ದೊರೆಯದ ಕಾರಣಕ್ಕೆ ಈ ಶಾಸಕರು ಇನ್ನೂ ಕಾಂಗ್ರೆಸ್‌ನಲ್ಲೇ ಮುಂದುವರೆದಿದ್ದಾರೆ ಎನ್ನಲಾಗುತ್ತಿದೆ. ಈಗ ಕಾಂಗ್ರೆಸ್‌ನಲ್ಲಿ ಅತೃಪ್ತರ ಹಲವು ಗುಂಪುಗಳು ರೂಪುಗೊಂಡಿರುವುದು ಬಿಜೆಪಿಗೆ ಲಾಭದಾಯಕವಾಗಿದ್ದು, ಆಪರೇಷನ್‌ ಕಮಲ ನಡೆಸಲು ಹದವಾದ ಪರಿಸ್ಥಿತಿಯಿದೆ ಎಂದೇ ಭಾವಿಸಲಾಗುತ್ತಿದೆ. ಹೀಗಾಗಿ ಬಿಜೆಪಿಯ ಕೆಲ ನಾಯಕರು ತೆರೆ ಮರೆಯಲ್ಲಿ ಇನ್ನೂ ಇಂತಹ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.

ಈ ಸುಳಿವು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರಿಗೂ ದೊರಕಿದೆ. ಹೀಗಾಗಿ ಅತೃಪ್ತ ಶಾಸಕರು ಬಿಜೆಪಿಯ ಆಮಿಷಗಳಿಗೆ ಬಲಿಯಾಗದಂತೆ ತಡೆಯಲು ಅವರಿಗೆ ಅಧಿಕಾರ ನೀಡುವ ಮೂಲಕ ಸಂತೈಸಬೇಕಾದ ಅನಿವಾರ್ಯತೆ ಮೂಡಿದ್ದು, ಅತೃಪ್ತ ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು
ಪಾಕ್‌ ಜಿಂದಾಬಾದ್‌ ಕೇಸ್‌: ಸಿಟಿ ರವಿ ಪ್ರಶ್ನೆಗೆ ಗೃಹಸಚಿವ ಸ್ಫೋಟಕ ಮಾಹಿತಿ