
ಪುಣೆ: ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಚಿನ್ನದ ಪದಕ ಬರುತ್ತದೆ ಎಂಬುದು ಈವರೆಗಿನ ನಿಯಮವಾಗಿತ್ತು. ಆದರೆ ಪುಣೆ ವಿಶ್ವವಿದ್ಯಾಲಯವು ಇದಕ್ಕೆ ಭಿನ್ನ.
ಹೆಚ್ಚಿನ ಅಂಕ ಪಡೆಯುವುದಷ್ಟೇ ಅಲ್ಲ, ಆ ವಿದ್ಯಾರ್ಥಿ ಕುಡುಕನಾಗಿರಬಾರದು ಹಾಗೂ ಸಸ್ಯಾಹಾರಿಯಾಗಿರ ಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ. ‘ಶೇಲಾರ್ ಮಾಮಾ’ ಎಂಬುವರ ಹೆಸರಿನಲ್ಲಿ ಚಿನ್ನದ ಪದಕವೊಂದಿದ್ದು, ಆ ಪದಕ ಪಡೆಯಲು ಈ ಷರತ್ತುಗಳು ಅನ್ವಯವಾಗುತ್ತವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ವಿವಿ ಘೋಷಣೆ ಹೊರಬೀಳುತ್ತಿದ್ದಂತೆಯೇ ಇದಕ್ಕೆ ವ್ಯಾಪಕ ಆಕ್ಷೇಪ, ಆಕ್ರೋಶಗಳು ವ್ಯಕ್ತವಾಗಿವೆ. ಎನ್’ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ನಿಯಮವನ್ನು ತೀವ್ರವಾಗಿ ವಿರೋಧಿಸಿದ್ದು, ‘ಇಂಥ ನಿರ್ಧಾರ ನನಗೆ ಆಘಾತ ತಂದಿದೆ. ಚಿನ್ನದ ಪದಕ ಸಿಗೋದು ಮೆರಿಟ್ ಮೇಲಲ್ಲವೇ? ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಹರಿಸೋದು ಬಿಟ್ಟು ಈ ರೀತಿ ಜನರನ್ನು ವಿಭಜಿಸುವುದು ಸರಿಯೇ?’ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.