ಯಾರೊಂದಿಗೂ ಫ್ರೆಂಡ್ಲಿ ಫೈಟ್ ಇಲ್ಲ: ಎಚ್‌ಡಿಕೆ

Published : Nov 11, 2017, 12:29 PM ISTUpdated : Apr 11, 2018, 12:34 PM IST
ಯಾರೊಂದಿಗೂ ಫ್ರೆಂಡ್ಲಿ ಫೈಟ್ ಇಲ್ಲ: ಎಚ್‌ಡಿಕೆ

ಸಾರಾಂಶ

ಚನ್ನಪಟ್ಟಣದಲ್ಲಿ  ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ಆರೋಪ ಸುಳ್ಳು: ಎಚ್‌ಡಿಕೆ

ಬೆಂಗಳೂರು: ‘ರಾಜ್ಯದ ಚನ್ನಪಟ್ಟಣ ಮಾತ್ರವಲ್ಲ ಯಾವ ಕ್ಷೇತ್ರದಲ್ಲೂ ಫ್ರೆಂಡ್ಲಿ ಫೈಟ್ ಇಲ್ಲ. ಪಕ್ಷ ಬಲವರ್ಧನೆಗೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಎ.ಮಂಜುನಾಥ್ (ಎ.ಮಂಜು) ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡಿದರು.

ನನ್ನನ್ನು ಚನ್ನಪಟ್ಟಣದಲ್ಲಿ ಎದುರಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆ ಕ್ಷೇತ್ರದ ನಾಯಕರೊಬ್ಬರು ಹೇಳಿದ್ದಾರೆ. ಆ ನಾಯಕರು (ಸಿ.ಪಿ. ಯೋಗೇಶ್ವರ್) ತಮ್ಮ ಮೇಲಿನ ಮೆಗಾ ಸಿಟಿ ಹಗರಣವನ್ನು ಮುಚ್ಚಿ ಹಾಕಿಸಲು ಯಾರ್ಯಾರ ಮನೆ ಬಾಗಿಲಿಗೆ ಹೋಗಿ ನಿಂತಿದ್ದರು ಎಂಬ ಸಂಗತಿ ಗೊತ್ತಿದೆ. ಚನ್ನಪಟ್ಟಣದಲ್ಲಿ ಫ್ರೆಂಡ್ಲಿ ಫೈಟ್ ಎಂಬುದೆಲ್ಲ ಸುಳ್ಳು ಎಂದು ಹರಿಹಾಯ್ದರು. ಕಳಂಕಿತ ವ್ಯಕ್ತಿಯನ್ನು ಪಕ್ಷದ ರಾಜ್ಯದ ಉಸ್ತುವಾರಿಯಾಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ದುರ್ಗತಿ ಎತ್ತಿ ತೋರಿಸುತ್ತದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ವೇಣುಗೋಪಾಲ್ ಅವರು ಸರ್ಕಾರದ ಪ್ರತಿನಿಧಿ ಅಲ್ಲ. ಹಾಗಾಗಿ ಅವರ ರಾಜೀನಾಮೆ ಅಥವಾ ಉಸ್ತುವಾರಿಯಿಂದ ಬಿಡುಗಡೆಗೊಳಿಸುವಂತೆ ನಾವು ಒತ್ತಾಯಿಸುವುದಿಲ್ಲ ಎಂದರು.

ಬಸ್ಸಲ್ಲೇ ಕಮೋಡ್ ಇದೆ: ‘ಎಚ್‌ಡಿಕೆ ಗ್ರಾಮವಾಸ್ತವ್ಯಕ್ಕೆ ಕಮೋಡ್ ಒಯ್ತಾರೆ ಎಂದು ಗ್ರಾಮ ವಾಸ್ತವ್ಯ ಕುರಿತು ವ್ಯಂಗ್ಯವಾಡುವ ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದ ಎಚ್‌ಡಿ ಕುಮಾರಸ್ವಾಮಿ, ವಿಕಾಸವಾಹಿನಿ ಬಸ್ಸಿನಲ್ಲೇ ಕಮೋಡ್ ಇದೆ. ಈ ಬಗ್ಗೆ ವಿಷಯ ತಿಳಿದು ಮಾತನಾಡಬೇಕು.ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!