ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ: ಎಲ್ಲೆಡೆ ಗುಮಾನಿ

Published : Nov 11, 2017, 11:47 AM ISTUpdated : Apr 11, 2018, 01:00 PM IST
ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ: ಎಲ್ಲೆಡೆ ಗುಮಾನಿ

ಸಾರಾಂಶ

ಹಿರಿಯ ಕಾಂಗ್ರೆಸ್ ನಾಯಕ ಸಾದತ್ ಆಲಿ ಖಾನ್ ಅವರ ಮಂಡ್ಯದ ನಿವಾಸವನ್ನು ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಖರೀದಿ ಮಾಡಿದ್ದಾರೆ ಎಂಬ ಗುಮಾನಿ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಯಾವುದೇ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ.

ಮಂಡ್ಯ: ಹಿರಿಯ ಕಾಂಗ್ರೆಸ್ ನಾಯಕ ಸಾದತ್ ಆಲಿ ಖಾನ್ ಅವರ ಮಂಡ್ಯದ ನಿವಾಸವನ್ನು ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಖರೀದಿ ಮಾಡಿದ್ದಾರೆ ಎಂಬ ಗುಮಾನಿ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಯಾವುದೇ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ.

ಮೂಲಗಳ ಪ್ರಕಾರ ವಿದ್ಯಾನಗರದ ಕೆ.ಆರ್. ರಸ್ತೆಯ ಕ್ರೀಡಾಂಗಣದ ಬಲ ಭಾಗದಲ್ಲಿರುವ ತಮ್ಮ ನಿವಾಸವನ್ನು ಸಾದತ್ ಆಲಿ ಖಾನ್ ಕಳೆದ ಮೂರ್ನಾಲ್ಕು ವರ್ಷಗಳಿಂದ ರಮ್ಯಾ ಅವರಿಗೆ ಉಚಿತವಾಗಿ ನಿವಾಸದಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಂತರ ರಮ್ಯಾ 25 ಲಕ್ಷ ರು. ಖರ್ಚು ಮಾಡಿ ಹಳೆಯ ಮನೆಯನ್ನು ನವೀಕರಣಗೊಳಿಸಿ ಗೃಹ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇದನ್ನು ರಮ್ಯಾ, ಅವರ ಕುಟುಂಬ, ಆಪ್ತ ವಲಯ ಖಚಿತ ಪಡಿಸುತ್ತಿಲ್ಲ. ‘ಸಾದತ್ ಆಲಿ ಖಾನ್ ನಿವಾಸವನ್ನು ಖರೀದಿ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನ್ನ ಪ್ರಕಾರ ಅಂತಹ ಪ್ರಕ್ರಿಯೆ ನಡೆದಿಲ್ಲ’ ಎಂದು ಖಾನ್ ಅವರ, ಹೆಸರು ಹೇಳಲು ಬಯಸದ ಕುಟುಂಬ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರಮ್ಯಾ ಅವರನ್ನು ಸ್ಪರ್ಧೆಗೆ ಇಳಿಸುವ ಬಗ್ಗೆ ತೀವ್ರ ಚಿಂತನೆ ನಡೆದಿದೆ. ಈ ಕಾರಣಕ್ಕಾಗಿ ತಾವು ನವೀಕರಣಗೊಳಿಸಿದ ಮನೆಯಲ್ಲಿ ವಾಸ್ತವ್ಯ ಹೂಡಿ ರಾಜಕೀಯ ಚಟುವಟಿಕೆ ಆರಂಭಿಸಲು ರಮ್ಯಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಈ ನಡುವೆ ನ.29ರಂದು ರಮ್ಯಾ ಹುಟ್ಟುಹಬ್ಬ. ಆ ದಿನ ಮಂಡ್ಯದಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆಂಬ ಮಾಹಿತಿ ಆಪ್ತ ವಲಯಕ್ಕೆ ನೀಡಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌