
ಗುವಾಹಟಿ (ಡಿ.17): ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲಾ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಟೀ ಜೊತೆ ಬಿಸ್ಕೇಟ್ ಅಥವಾ ಒಣ ಹಣ್ಣುಗಳು ಮತ್ತು ಕುಡಿಯುವ ನೀರನ್ನು ಮಾತ್ರ ನೀಡಬೇಕು. ಅವರು ಮಾತನಾಡುವ ಮುನ್ನ ಇಬ್ಬರಿಗಿಂತ ಜಾಸ್ತಿ ಜನ ಮಾತನಾಡುವಂತಿಲ್ಲ. ಇದು ಅಸ್ಸಾಂ ಸರ್ಕಾರ ರೂಪಿಸಿದ ಹೊಸ ನಿಯಮವಾಗಿದೆ.
ಮುಖ್ಯಮಂತ್ರಿಯವರು ಬಹಳ ಬ್ಯುಸಿ ಇರುವುದರಿಂದ ಅವರು ಭಾಗವಹಿಸುವ ಕಾರ್ಯಕ್ರಮ ಒಂದು ತಾಸಿಗಿಂತ ಹೆಚ್ಚಿರಬಾರದು. ಸಿಎಂ ಒಪ್ಪಿಗೆ ಇಲ್ಲದೇ ಕಾರ್ಯಕ್ರಮವನ್ನು ಒಂದು ತಾಸಿಗಿಂತ ಹೆಚ್ಚು ಮುಂದುವರೆಸಬಾರದು ಎಂದು ಹೊಸ ನಿಯಮ ಹೇಳುತ್ತದೆ.
ವೇದಿಕೆಯ ಮೇಲೆ ಮುಂಭಾಗದ ಸಾಲಿನಲ್ಲಿ ಕೇವಲ 6 ಆಸನಗಳನ್ನು ಮಾತ್ರ ಹಾಕಬೇಕು. ವೇದಿಕೆಯ ಮೇಲೆ 2 ಸಾಲುಗಳಿಗಿಂತ ಹೆಚ್ಚಿರಬಾರದು. ಮೊದಲ ಹಾಗೂ ಎರಡನೇ ಸಾಲಿನ ನಡುವೆ 4 ಅಡಿಗಿಂತ ಕಡಿಮೆ ಅಂತರವಿರಬಾರದು ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.