ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಆನ್‌ಲೈನ್ ವಸ್ತುಗಳನ್ನು ಕಣ್ಣುಮುಚ್ಚಿ ಆರ್ಡರ್ ಮಾಡುವವ ಗ್ರಾಹಕರು ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಮುಂದುವರಿಯುವುದು ಒಳಿತು. ಆನ್‌ಲೈನಿನಲ್ಲಿ ಟಚ್‌ಸ್ಕ್ರೀನ್ ಮೊಬೈಲ್ ಬುಕ್ ಮಾಡಿದ್ದ ಗ್ರಾಹಕರೊಬ್ಬರಿಗೆ ಕಂಪನಿಯೊಂದು ಆಟಿಕೆ ಮೊಬೈಲ್ ನೀಡಿ ವಂಚಿಸಿದ ಘಟನೆ ಬೇಲೂರಿನಲ್ಲಿ ಬುಧವಾರ ನಡೆದಿದೆ.
ಬೇಲೂರು (ಮೇ.10): ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಆನ್‌ಲೈನ್ ವಸ್ತುಗಳನ್ನು ಕಣ್ಣುಮುಚ್ಚಿ ಆರ್ಡರ್ ಮಾಡುವವ ಗ್ರಾಹಕರು ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಮುಂದುವರಿಯುವುದು ಒಳಿತು. ಆನ್‌ಲೈನಿನಲ್ಲಿ ಟಚ್‌ಸ್ಕ್ರೀನ್ ಮೊಬೈಲ್ ಬುಕ್ ಮಾಡಿದ್ದ ಗ್ರಾಹಕರೊಬ್ಬರಿಗೆ ಕಂಪನಿಯೊಂದು ಆಟಿಕೆ ಮೊಬೈಲ್ ನೀಡಿ ವಂಚಿಸಿದ ಘಟನೆ ಬೇಲೂರಿನಲ್ಲಿ ಬುಧವಾರ ನಡೆದಿದೆ.
ಫೇಸ್‌ಬುಕ್‌ನ ಶಾಪ್‌ಮ್ಯಾಕ್ಸ್‌ನಲ್ಲಿ ನೋಕಿಯ ಕಂಪನಿಯ ₹4,500 ಬೆಲೆಯ ಸ್ಕ್ರೀನ್ ಟಚ್ ಮೊಬೈಲ್ ಅನ್ನು ₹1,299 ರ ಆಫರ್‌ಗೆ ನೀಡುವುದಾಗಿ ಜಾಹೀರಾತು ಪ್ರಕಟಿಸಲಾಗಿತ್ತು. ಇದನ್ನು ನೋಡಿ ಪಟ್ಟಣದ ತೀರ್ಥಪ್ರಸಾದ್ ಅವರು ಆನ್‌ಲೈನ್ ಬುಕ್ಕಿಂಗ್ ಮಾಡಿದ್ದರು. ಮಂಗಳವಾರ ತೀರ್ಥಪ್ರಸಾದ್ ಅವರಿಗೆ ಪಾರ್ಸಲ್‌ನಲ್ಲಿ ಮೊಬೈಲ್ ಬಂದಿದ್ದು, ಹಣ ನೀಡಿ ಸ್ವೀಕರಿಸಿದ್ದರು. ಆದರೆ, ಪಾರ್ಸಲ್ ತೆಗೆದು ನೋಡಿದಾಗ ಅದರಲ್ಲಿ ಟಚ್‌ಸ್ಕ್ರೀನ್ ಮೊಬೈಲ್ ಬದಲಿಗೆ ಮಕ್ಕಳಾಡುವ ಆಟಿಕೆಯ ಮೊಬೈಲ್ ಇತ್ತು. ಈ ಸಂಬಂಧ ತೀರ್ಥಪ್ರಸಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.