
ಹುಬ್ಬಳ್ಳಿ(ಸೆ.15): ಮಳೆ ಕೊರತೆ ಮಧ್ಯೆ ಬಂಪರ್ ಈರುಳ್ಳಿ ಬೆಳೆ. ಆದರೆ ರೈತರಿಗೆ ಮಾತ್ರ ಬಾರೀ ನಿರಾಸೆ. ಇದಕ್ಕೆಲ್ಲಾ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಉಳ್ಳಗಡ್ಡಿಯನ್ನೇ ನಂಬಿದ್ದ ಅನ್ನದಾತನಿಗೆ ಕಣ್ಣೀರು ತರಿಸಿದೆ.
ರಾಜ್ಯದಲ್ಲಿ ಮುಂಗಾರು ವೈಫಲ್ಯವಾಗಿದೆ, ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ ನೀರಾವರಿ ಪ್ರದೇಶದ ರೈತರು ಅಲ್ಪ ನೀರಿನಲ್ಲೂ ಬಂಫರ್ ಈರುಳ್ಳಿ ಬೆಳೆದಿದ್ದಾರೆ. ಇದರಿಂದಾಗಿ ಎಕರೆಗೆ 80 ರಿಂದ 90 ಚೀಲದಂತೆ ಇಳುವರಿಯೂ ಬಂದಿತ್ತು. ಆದ್ರೆ ಮಾರುಕಟ್ಟೆಯಲ್ಲಿ ಮಾತ್ರ ಉತ್ತಮ ಬೆಲೆಯಿಲ್ಲ. ಕಳೆದ ಬಾರೀ ಕ್ವಿಂಟಲ್‌ಗೆ ಈರುಳ್ಳಿ 4 ಸಾವಿರದಿಂದ 5 ಸಾವರವರೆಗೆ ಮಾರಾಟವಾಗಿತ್ತು. ಆದರೀಗ 300 ರೂಪಾಯಿಗೆ ಕುಸಿದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಇನ್ನೂ ಸಾಲಸೋಲ ಮಾಡಿ ಈರುಳ್ಳಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿನ ಬೆಲೆಯಿಂದ ಮಾಡಿದ ಖರ್ಚು ಸರಿದೂಗಿಸುವುದು ಕಷ್ಟವಾಗಿದೆ. ಇನ್ನೊಂದಡೆ ಹೊರ ಜಿಲ್ಲೆಗಳ ಈರುಳ್ಳಿ ಸಾಗಿಸಲು ಪ್ರತಿ ಚೀಲಕ್ಕೆ 150ರಿಂದ 200ರೂಪಾಯಿ ವ್ಯಯಿಸಬೇಕಿದೆ. ಹೀಗಾಗಿ ಈರುಳ್ಳಿ ಮಾರಾಟದಿಂದ ಬಂದ ಹಣ ಸಾಗಾಟಕ್ಕೆ ಸಾಕಾಗುವುದಿಲ್ಲ ಅಂತಾರೆ ರೈತರು.
ಒಟ್ಟಾರೆ ಮುಂಗಾರು ವೈಫಲ್ಯದ ಮಧ್ಯೆಯೂ ಕಷ್ಟುಪಟ್ಟು ಈರುಳ್ಳಿ ಬೆಳೆದ ರೈತರಿಗೆ ಈ ಬಾರೀ ಮತ್ತೆ ನಿರಾಸೆಯಾಗಿದೆ. ಕೂಡಲೇ ಸರ್ಕಾರ ಬೆಂಬಲ ಬೆಲೆ ಘೋಷಿಸಲಿ ಅನ್ನೋದು ರೈತರ ಆಗ್ರಹವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.