
ಬೆಂಗಳೂರು(ಸೆ.15): ಕಾವೇರಿ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ಸದ್ಯಕ್ಕಂತು ನಿಲ್ಲುವ ಯಾವ ಲಕ್ಷಣವೂ ಕಾಣ್ತಿಲ್ಲ.. ಕಾವೇರಿ ಮುಂದುವರಿದ ಹೋರಾಟವಾಗಿ ಇಂದು ರೈಲ್ ರೋಕೋ ಚಳವಳಿ ನಡೆಯಲಿದೆ. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕನ್ನಡಪರ ಸಂಘಟನೆ ನಿರ್ಧರಿಸಿದ್ದು, ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಸಿದ್ಧವಾಗಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ.
ಮಳೆ ನಿಂತರೂ ಹನಿ ನಿಲ್ಲಲ್ಲ ಎನ್ನುವ ಹಾಗೆ, ಕಾವೇರಿ ಹೋರಾಟದ ಕಾವು ಇನ್ನು ತಣ್ಣಗಾಗಿಲ್ಲ. ಇವತ್ತು ಇಂದು ರೈಲು ಬಂದ್'ಗೆ ವಾಟಾಳ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.
ಬೆಳಗ್ಗೆ 10 ಗಂಟೆಯಿಂದ ರೈಲು ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ನಿರ್ಧಾರಿಸುವುದಾಗಿ ತಿಳಿದು ಬಂದಿದೆ. ರೈಲ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಸಿಟಿ ರೈಲ್ವೆ ಸ್ಟೇಷನ್ ಸೇರಿದಂತೆ ಹಲವು ರೈಲ್ವೆ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕಾವೇರಿ ಪ್ರತಿಭಟನೆ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಷೇದಾಜ್ಞೆ ಮುಂದುವರಿಸಲಾಗಿದೆ. ಸೆಪ್ಟಂಬರ್ 25ರ ಮಧ್ಯರಾತ್ರಿ ವರೆಗೆ ನಗರದಲ್ಲಿ ನಿಷೇಧಾಜ್ಞೆ ವಿಸ್ತರಿಸಿ ಪೊಲೀಸ್ ಆಯುಕ್ತ ಮೇಘರಿಕ್ ಆದೇಶಿಸಿದ್ದಾರೆ.
ಕಾವೇರಿ ಕೊಳ್ಳದಲ್ಲಿ ಮುಂದುವರಿದ ಹೋರಾಟ
ಇನ್ನೂ ಕಾವೇರಿ ಹೋರಾಟದ ಕಾವು ಜೋರಾಗಿದ್ದೇ ಇಂದೂ ಕೂಡ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತಿಭಟನೆ ಮುಂದುವರಿಯಲಿದೆ.. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಮಂಡ್ಯದಲ್ಲಿ ಇಂದೂ ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇತ್ತ ಕಳೆದ ಸೋಮವಾರ ತಮಿಳುನಾಡಿನ ರಾಮೇಶ್ವರಂಗೆ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ಆದ್ರೆ ರಾಮೇಶ್ವರಂನಲ್ಲಿ ಹಲ್ಲೆಗೊಳಗಾಗಿದ್ದ ಟಿಟಿ ಚಾಲಕ ಕುಂದಾಪುರದ ಮಂಜುನಾಥ್ ಅಲ್ಲೆ ತಂಗಿದ್ದಾರೆ.. ಇನ್ನೂ ಸುರಕ್ಷಿತವಾಗಿ ಬಂದ 12 ಮಂದಿ ತಮಿಳುನಾಡಿನಲ್ಲಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಒಟ್ಟಾರೆ ಸದ್ಯಕ್ಕಂತು ಕಾವೇರಿ ತೀವ್ರ ಸ್ವರೂಪದ ಹೋರಾಟ ಹತೋಟಿಗೆ ಬಂದಿದ್ದು, ನೆಮ್ಮದಿಯನ್ನ ತಂದಿದೆ. ಆದರೆರೆ ಅತ್ತ ತಮಿಳುನಾಡಿನಲ್ಲಿ ನಾಳೆ ಬಂದ್‌ಗೆ ವಿರೋಧ ಪಕ್ಷಗಳು ಕರೆ ನೀಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.