‘ಕೈ’ ಬಿಟ್ಟು ‘ಹೂ’ ಹಿಡಿಯುತ್ತಿರುವ ನಾಯಕರು: ಇಂದು ಕಮಲ ಹಿಡಿಯಲಿರುವ ಜಯಪ್ರಕಾಶ್ ಹೆಗ್ಡೆ

Published : Mar 07, 2017, 09:14 PM ISTUpdated : Apr 11, 2018, 12:54 PM IST
‘ಕೈ’ ಬಿಟ್ಟು ‘ಹೂ’ ಹಿಡಿಯುತ್ತಿರುವ ನಾಯಕರು: ಇಂದು ಕಮಲ ಹಿಡಿಯಲಿರುವ ಜಯಪ್ರಕಾಶ್ ಹೆಗ್ಡೆ

ಸಾರಾಂಶ

ನಾನಾ ಪಕ್ಷಗಳ‌‌ ನಾಯಕರ ಬಿಜೆಪಿ ಸೇರ್ಪಡೆ ಪರ್ವ ಮುಂದುವರಿದಿದೆ. ಇವತ್ತು ಪಕ್ಷದ ಕೆಲ‌ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಡಿಸಿಎಂ ಅಶೋಕ್ ಮಾಜಿ ಸಚಿವ ಅಂಬರೀಶ್ ಅವರನ್ನ ಭೇಟಿಯಾಗಿ ಮಾತುಕತೆ ‌ನಡೆಸಿದ್ದಾರೆ.

ಬೆಂಗಳೂರು(ಮಾ.08): ನಾನಾ ಪಕ್ಷಗಳ‌‌ ನಾಯಕರ ಬಿಜೆಪಿ ಸೇರ್ಪಡೆ ಪರ್ವ ಮುಂದುವರಿದಿದೆ. ಇವತ್ತು ಪಕ್ಷದ ಕೆಲ‌ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಡಿಸಿಎಂ ಅಶೋಕ್ ಮಾಜಿ ಸಚಿವ ಅಂಬರೀಶ್ ಅವರನ್ನ ಭೇಟಿಯಾಗಿ ಮಾತುಕತೆ ‌ನಡೆಸಿದ್ದಾರೆ.

ಮಾಜಿ ಸಂಸದ, ಸಜ್ಜನ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಇವತ್ತು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ನ ಮಾಜಿ ಶಾಸಕ ಜೆ.ಡಿ. ನಾಯ್ಕ್, ಜೆಡಿಎಸ್ ಮುಖಂಡ ರತನ್ ಸಿಂಗ್ ಕೂಡ ಕಮಲ ಹಿಡಿಯುವುದು ಖಚಿತ ಆಗಿದೆ.

ಬಿಜೆಪಿಗೆ ಬಲ: ಇಂದು ಕಮಲ ಹಿಡಿಯಲಿರುವ ಜಯಪ್ರಕಾಶ್ ಹೆಗ್ಡೆ 

ಮಲೆನಾಡು ಭಾಗದ ಸಜ್ಜನ ರಾಜಕರಾಣಿ ಅಂತಲೇ ಗುರ್ತಿಸಿಕೊಂಡಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಇವತ್ತು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಆರ್. ಅಶೋಕ್ ನಿನ್ನೆ ಮಾಜಿ ಸಚಿವ ಅಂಬರೀಶ್ ಅವರ ಬೆಂಗಳೂರು ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದು ಅಶೋಕ್ ಹಾಗೂ ಅಂಬರೀಶ್ ಅವರ ನಡುವೆ ನಡೆದಿರೋ ಮೂರನೇ ಸಭೆ. ಈ ಹಿಂದೆ ಒಮ್ಮೆ ಬೆಂಗಳೂರಿನಲ್ಲಿ ನಂತರ ದುಬೈನಲ್ಲಿ ‌ಮಾತುಕತೆ ನಡೆದಿತ್ತು. ಇವತ್ತಿನ ಸಭೆಯ ನಂತರ ಅಂಬರೀಶ್ ‌ಅಂತಿಮ ತೀರ್ಮಾನ‌ ಕೈಗೊಳ್ಳಲು ಇನ್ನಷ್ಟು ಸಮಯ‌ ಪಡೆದಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು, ಎಸ್ಸೆಂ ಕೃಷ್ಣ ಹಾಗೂ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತ, ಹನೂರಿನ ಮಾಜಿ ಶಾಸಕಿ ‌ಪರಿಮಳ ನಾಗಪ್ಪ ಸೇರ್ಪಡೆಗೆ ಮಾಜಿ ಸಚಿವ ವಿ. ಸೋಮಣ್ಣ ತೀವ್ರ ಅಸಮಾಧಾನ ಹೊಂದಿದ್ದು, ಬಹಿರಂಗವಾಗಿ ಪ್ರಕಟಿಸಲಾಗದ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ಪರಿಮಳ ನಾಗಪ್ಪ ಸೇರ್ಪಡೆ ಇದೇ 16ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪರಿಮಳ ನಾಗಪ್ಪ ಅವರನ್ನ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇದೇ 18ರಂದು ಭಾರತೀಯ ಜನತಾಪಾರ್ಟಿ ಸೇರುವ ಸಾಧ್ಯತೆಗಳಿವೆ. ಒಟ್ಟಾರೆ, ನಾನಾ ಪಕ್ಷಗಳ ನಾಯಕರ ಬಿಜೆಪಿ ಸೇರ್ಪಡೆ ‌ಪರ್ವ ಮುಂದುವರಿದಿದ್ದು, ಬಜೆಟ್ ನಂತರ‌ ಮತ್ತಷ್ಟು ಪ್ರಮುಖ ನಾಯಕರು ಕಮಲ‌ ಪಕ್ಷದ ಕಡೆಗೆ ಮುಖಮಾಡುವ ಸಾಧ್ಯತೆಗಳಿವೆ.

ವರದಿ: ವೀರೇಂದ್ರ ಉಪ್ಪುಂದ., ಸುವರ್ಣನ್ಯೂಸ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್