
ನವದೆಹಲಿ(ಏ.26): ಮುಸ್ಲಿಮರ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಠಿಣ ಮಾರ್ಗಸೂಚಿಗನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ಒಟ್ಟಿಗೇ ತ್ರಿವಳಿ ತಲಾಖ್ ಹೇರುವವರಿಗೆ ಸಾಮಾ ಜಿಕ ಬಹಿಷ್ಕಾರ ಹಾಕಲು ಕರೆ ನೀಡಲಾಗಿದೆ. ತಲಾಖ್ ನೀಡಲು 3 ತಿಂಗಳ ಸಮಯಾವಕಾಶ ಕಲ್ಪಿಸಲಾಗಿದ್ದು, 90 ದಿನದ ಅವಧಿಯಲ್ಲಿ ಮತ್ತೆ ಒಂದಾಗಲು ದಂಪತಿಗೆ ಅವಕಾಶ ನೀಡಲಾಗಿದೆ.
ಮಾರ್ಗಸೂಚಿಗಳು
1)ದಂಪತಿ ನಡುವೆ ಮನಸ್ತಾಪ ಇದ್ದರೆ ಸಂಧಾನಕ್ಕೆ ಆದ್ಯತೆ ನೀಡಬೇಕು.
2)ಸಂಧಾನ ಸಾಧ್ಯವಾಗದೇ ಹೋದರೆ ತಾತ್ಕಾಲಿಕವಾಗಿ ದೂರ ಇರಬೇಕು.
3)ಆಗಲೂ ಮನಸ್ತಾಪ ಉಳಿದರೆ ಎರಡೂ ಕುಟುಂಬಗಳು ಕೂತು ಮಾತಾಡಬೇಕು.
4)ಇದೂ ವಿಫಲವಾದರೆ ಪತ್ನಿಗೆ ಋುತುಸ್ರಾವ ಆಗದಿದ್ದಾಗ ಪತಿ ಒಂದು ಸಲ ಮಾತ್ರ ತಲಾಖ್ ಹೇಳಬೇಕು. ಬಳಿಕ 3 ತಿಂಗಳು ಕಾದು ಭಿನ್ನಮತ ಶಮನಕ್ಕೆ ಯತ್ನಿ ಸಬೇಕು. ಶಮನವಾದರೆ 90 ದಿನ ದೊಳಗೇ ಕೂಡಿ ಜೀವನ ಆರಂಭಿ ಸಬೇಕು. ಈ 90 ದಿನದಲ್ಲಿ ಭಿನ್ನಮತ ಶಮನವಾಗದೇ ಹೋದರೆ ತಲಾಖ್ ಜಾರಿ ಆಗಿದೆ ಎಂದರ್ಥ. ಆದರೆ ಪತ್ನಿ ಗರ್ಭಿಣಿಯಾಗಿದ್ದರೆ ಆಕೆ ಮಗು ಹೆರುವವರೆಗೆ ತಲಾಖ್ ಜಾರಿಯಾಗದು.
5)90 ದಿನದ ನಂತರ ಮನಸ್ತಾಪ ಬಗೆಹರಿದರೆ ಇಬ್ಬರೂ ಪರಸ್ಪರ ಮರು ವಿವಾಹ ಆಗಬೇಕು.
6)3 ತಿಂಗಳ ಅವಧಿಯಲ್ಲಿ ತಿಂಗಳಿಗೊಮ್ಮೆ ತಲಾಖ್ ಹೇಳಬೇಕು. 2ನೇ ತಲಾಖ್ ಹೇಳಿದ ಬಳಿಕ 3ನೇ ತಿಂಗಳಲ್ಲಿ ಭಿನ್ನಮತ ಬಗೆಹರಿದರೆ 3ನೇ ತಲಾಖ್ ಹೇಳುವ ಅಗತ್ಯವಿಲ್ಲ.
7) ಪತ್ನಿಗೆ ಪತಿ ಇಷ್ಟವಾಗದೇ ಹೋದರೆ ‘ಖುಲಾ' ಮೂಲಕ ಬೇರೆಯಾಗಬಹುದು.
8) ತ್ರಿವಳಿ ತಲಾಖನ್ನು ಒಟ್ಟಿಗೇ ಹೇಳುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಆಗ ಈ ಪದ್ಧತಿ ನಿಯಂತ್ರಣಕ್ಕೆ ಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.