ಕರ್ನಾಟಕ ರಾಜಕಾರಣದಲ್ಲಿ ಅಚ್ಚರಿ, ಕೈ ಶಾಸಕನ ಅಮಾನತು ವಾಪಸ್ ಪಡೆದ KPCC

By Web DeskFirst Published May 29, 2019, 9:06 PM IST
Highlights

ದೋಸ್ತಿ ಸರಕಾರಕ್ಕೆ ಇರಿಸು ಮುರಿಸು ತಂದಿದ್ದ ಕಂಪ್ಲಿ-ಗಣೇಶ್ ಮತ್ತು ಆನಂದ್ ಸಿಂಗ್ ಗಲಾಟೆಯಲ್ಲಿ ಅಮಾನತಿಗೆ ಗುರಿಯಾಗಿದ್ದ ಶಾಸಕ ಗಣೇಶ್ ಗೆ ಪಕ್ಷ ರಿಲೀಫ್ ನೀಡಿದೆ.

ಬೆಂಗಳೂರು[ಮೇ. 29]  ಅಚ್ಚರಿಯ ಬೆಳವಣಿಗೆಯಲ್ಲಿ  ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಹಿಂಪಡೆದಿದೆ. ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಹಲವು ತಂತ್ರ ಅನುಸರಿಸುತ್ತಿದ್ದು ಅದರಲ್ಲಿ ಇದು ಒಂದು ಹೇಳಲಾಗಿದೆ.

ಈಗಲ್ಟನ್ ರೆಸಾರ್ಟ್‌ನಲ್ಲಿ ನಡೆದ ಗಲಾಟೆ ಬಳಿಕ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿತ್ತು. ಆದರೆ ಈಗ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಚರ್ಚಿಸಿ ಅಮಾನತು ಆದೇಶ ಹಿಂದಕ್ಕೆ ಪಡೆಯಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಆನಂದ್ ಸಿಂಗ್-ಕಂಪ್ಲಿ ಗಣೇಶ್ ನಡುವೆ ಅಂದು ನಡೆದಿದ್ದೇನು?

ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ಅತೃಪ್ತರನ್ನು ಸೆಳೆಯಲು ಬಿಜೆಪಿ ಯತ್ನ ಮಾಡುತ್ತಿದೆ ಎಂಬ ಮಾತು ಕೇಳಿ ಬಂದಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿತಂತ್ರ ನಡೆಸುತ್ತಿದೆ. ಅದರ ಭಾಗವಾಗಿಯೇ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.

 

click me!