ಬೀದರ್'ನಲ್ಲಿ ಬಸ್ ದುರಂತಕ್ಕೆ ಮಗು ಬಲಿ; ಎಲ್ಲರನ್ನೂ ರಕ್ಷಿಸಿದವ ತನ್ನ ಮಗುವನ್ನೇ ಮರೆತುಬಿಟ್ಟ

Published : Sep 16, 2016, 01:08 PM ISTUpdated : Apr 11, 2018, 12:53 PM IST
ಬೀದರ್'ನಲ್ಲಿ ಬಸ್ ದುರಂತಕ್ಕೆ ಮಗು ಬಲಿ; ಎಲ್ಲರನ್ನೂ ರಕ್ಷಿಸಿದವ ತನ್ನ ಮಗುವನ್ನೇ ಮರೆತುಬಿಟ್ಟ

ಸಾರಾಂಶ

ಬೀದರ್(ಸೆ. 16): ರಾಜ್ಯದಲ್ಲಿ ಮತ್ತೊಂದು ಬಸ್ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೂರು ವರ್ಷದ ಬಾಲಕನೊಬ್ಬ ಸಜೀವ ದಹನವಾದ ದಾರುಣ ಘಟನೆ ಬೀದರ್'​ನಲ್ಲಿ ನಡೆದಿದೆ. ವಿಧಿ ವಿಪರ್ಯಾಸ ಎಂದರೆ, ಈ ದುರಂತದಲ್ಲಿ ಇಡೀ ಬಸ್'​ನಲ್ಲಿದ್ದವರನ್ನೆಲ್ಲಾ ರಕ್ಷಿಸಲು ನೆರವಾದ ವ್ಯಕ್ತಿ, ತನ್ನ ಮಗುವನ್ನೇ ಮರೆತುಬಿಟ್ಟರು.

ಹುಮನಾಬಾದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೆಳಗ್ಗೆ ಶಿರಡಿಯಿಂದ ಹೈದ್ರಾಬಾದ್​​ ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್'ನ ಕಾವೇರಿ ಬಸ್'​ಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಹೈದ್ರಾಬಾದ ಮೂಲದ 3 ವರ್ಷದ ವಿಹಾನ ರಾಮಪ್ರಸಾದ ಸಜೀವ ದಹನಗೊಂಡು, ಮೂವರಿಗೆ ಗಂಭೀರ ಗಾಯವಾಗಿದೆ.

ಬಸ್​ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಚಾಲಕನು ಠಾಕೂರ್ ಢಾಬಾ ಬಳಿ ಬೆಳಗ್ಗೆ 6:15ಕ್ಕೆ ಬಸ್​ ನಿಲ್ಲಿಸಿದ್ದಾನೆ.. ತತ್'ಕ್ಷಣ ಆ ವ್ಯಕ್ತಿಯು ಎಚ್ಚೆತ್ತು ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಮಲಗಿದ್ದ ಪ್ರಯಾಣಿಕರನ್ನ ಎಚ್ಚರಿಸಿ ಹಿಂಬದಿಯ ಕಿಟಕಿ ಹೊಡೆದು ಹೊರಬರಲು ಸಹಕರಿಸಿದ್ದಾರೆ. ಆದ್ರೆ, ಮಲಗಿದ್ದ ತನ್ನ ಮಗುವನ್ನೇ ಮರೆತುಬಿಡುತ್ತಾರೆ. ಪರಿಣಾಮ ಆ ಮೂರು ವರ್ಷದ ಕಂದಮ್ಮ ಸಜೀವ ದಹನವಾಗಿದೆ.

ಒಟ್ಟಿನಲ್ಲಿ ಹೈಟೆಕ್​ ಬಸಗಳಿಗೆ ಆಕಸ್ಮಿಕ ಬೆಂಕಿ ತಗಲೋ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬೀದರನಲ್ಲಿ ಭಾರಿ ದುರಂತ ತಪ್ಪಿದೆಯಾದರೂ ಬಾಲಕನನ್ನು ಕಳೆದುಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ: ಅನೀಲಕುಮಾರ್​​ ದೇಶಮುಖ್,​​ ಸುವರ್ಣ ನ್ಯೂಸ್​,​​ ಬೀದರ್​​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?