ಶಹಾಬುದ್ದೀನ್ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಮೊರೆ ಹೋದ ಬಿಹಾರ ಸರ್ಕಾರ

By Internet DeskFirst Published Sep 16, 2016, 12:28 PM IST
Highlights

ಬಿಹಾರ (ಸೆ.14): ಆರ್ ಜೆಡಿ ಮುಖಂಡ ಮಹಮ್ಮದ್ ಶಹಾಬುದ್ದೀನ್ ರವರ ಜಾಮೀನನ್ನು  ರದ್ದುಗೊಳಿಸಬೇಕೆಂದು ಕೋರಿ ಬಿಹಾರ ಸರ್ಕಾರ ಸುಪ್ರೀಂ  ಮೆಟ್ಟಿಲೇರಿದೆ.

ಪಾಟ್ನಾ ಹೈಕೋರ್ಟ್ ಜಾಮೀನು ನೀಡಿ ಸಿವಾನ್ ಸೆಂಟ್ರಲ್ ಜೈಲಿನಿಂದ ಶಹಾಬುದ್ದೀನ್ ಬಿಡುಗಡೆಯಾಗಿದ್ದರು. ಇವರ ಬಿಡುಗಡೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಬೇರೆ ಬೇರೆ ಪ್ರಕರಣದಲ್ಲಿ ಇವರ ಮೇಲೆ ಚಾರ್ಜ್ ಹಾಕಲಾಗಿದೆ.

ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಇವರ ಬಿಡುಗಡೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಅಪರಾಧ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಶಹಾಬುದ್ದೀನ್ ರನ್ನು ಜೈಲಿಗೆ ಕಳುಹಿಸಬೇಕೆಂದು ನಿತೀಶ್ ಕುಮಾರ್ ಸರ್ಕಾರದ ಮೇಲೆ ಒತ್ತಡವಿದೆ. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ನಿತೀಶ್ ಕುಮಾರ್  ಸಂದರ್ಭವಶಾರ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

click me!