ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು : ಸುಪ್ರಿಂ

By Web DeskFirst Published Jul 18, 2018, 4:15 PM IST
Highlights
  • ಭಕ್ತಿಗೆ ಪುರುಷ, ಮಹಿಳೆಯರೆಂಬ ಭೇದಭಾವವಲ್ಲ. ಅದು ಎಲ್ಲರಿಗೂ ಸೇರಿದ್ದು
  • ದೇಗುಲದ ಆವರಣದಲ್ಲಿ ಲಿಂಗಭೇದ ಮಾಡುವುದು ಸಂವಿದಾನಕ್ಕೆ ವಿರುದ್ಧವಾದುದು

ನವದೆಹಲಿ[ಜು.18]: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾರ್ವಜನಿಕರಿಗಾಗಿ ದೇಗುಲವನ್ನು ಒಮ್ಮೆ ನೀವು  ತೆರೆದರೆ ಪ್ರತಿಯೊಬ್ಬರು ಪ್ರವೇಶಿಸಬಹುದು. ಭಕ್ತಿಗೆ ಪುರುಷ, ಮಹಿಳೆಯರೆಂಬ ಭೇದಭಾವವಲ್ಲ. ಅದು ಎಲ್ಲರಿಗೂ ಸೇರಿದ್ದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರ ನ್ಯಾಯಾಧೀಶರ ತಿಳಿಸಿದೆ. 

ದೇಗುಲದ ಆವರಣದಲ್ಲಿ ಲಿಂಗಭೇದ ಮಾಡುವುದು ಸಂವಿದಾನಕ್ಕೆ ವಿರುದ್ಧವಾದುದು. ಭಾರತದ ಯುವ ವಕೀಲರ ಸಮಿತಿ 800 ವರ್ಷಗಳ ಮಹಿಳೆಯರ ಪ್ರವೇಶ ನಿರಾಕರಣೆಯ ಸಂಪ್ರಾದಾಯದ ವಿರುದ್ಧ ಸುಪ್ರಿಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು. ಕೇರಳ ಸರ್ಕಾರ, ತಿರುವಾಂಕೂರ್ ದೇಗುಲ ಮಂಡಳಿ, ಶಬರಿಮಲ ದೇಗುಲದ ಮುಖ್ಯ ಅರ್ಚಕರು, ಪತಾನಮ್ತಿಟ್ಟದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು 10 ವರ್ಷದಿಂದ 50 ವರ್ಷದ ಮಹಿಳೆಯರು ದೇಗುಲ ಪ್ರವೇಶಿಸಬಾರದು ಎಂದು ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದರು.

click me!