ಫೆಬ್ರವರಿಯಲ್ಲಿ ಕೇಂದ್ರ ಮಧ್ಯಂತರ ಬಜೆಟ್ ಮಂಡನೆ!

By Web DeskFirst Published Nov 29, 2018, 9:01 AM IST
Highlights

ಲೋಕಸಭೆ ಚುನಾವಣೆಗೂ ಮೊದಲು ಫೆ.1ರಂದು ಕೇಂದ್ರ ಸರ್ಕಾರವು ತನ್ನ ಕೊನೆಯ ಮಧ್ಯಂತರ ಬಜೆಟ್‌ ಮಂಡಿಸಲಿದೆ. 

ನವದೆಹಲಿ[ನ.29]: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು 2019ರ ಫೆ.1ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಕೊನೆಯ ಬಜೆಟ್‌ ಇದಾಗಿದೆ.

ಏಪ್ರಿಲ್‌- ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಲಿದ್ದು, ಮೋದಿ ಸರ್ಕಾರದ 5 ವರ್ಷಗಳ ಅವಧಿ ಪೂರ್ಣಗೊಳ್ಳುತ್ತಿರುವುದರಿಂದ ಮಧ್ಯಂತರ ಬಜೆಟ್‌ ಮಂಡನೆಯಾಗುತ್ತಿದೆ. ಜೇಟ್ಲಿ ಅವರು ಮಂಡಿಸುತ್ತಿರುವ ಸತತ 6ನೇ ಬಜೆಟ್‌ ಇದಾಗಿದೆ. 2019​-20ನೇ ಸಾಲಿನ ಮಧ್ಯಂತರ ಬಜೆಟ್‌ಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.

ಕೇಂದ್ರದ ಸಚಿವಾಲಯಗಳಿಂದ ಬಜೆಟ್‌ಗೆ ಪೂರಕವಾದ ಮಾಹಿತಿಗಳನ್ನು ತರಿಸಿಕೊಳ್ಳಲಾಗಿದೆ. ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

click me!