
ಗಯಾ(ಜು.1): ಬಿಜೆಪಿ ಸಂಸದರೊಬ್ಬರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಗಾರ್ಡ್ ವೋರ್ವ, ತನ್ನ ರಿವಾಲ್ವರ್ ಅನ್ನು ಮಕ್ಕಳ ಕೈಗೆ ಕೊಟ್ಟು ಕ್ರಿಕೆಟ್ ಆಡಿದ್ದಾರೆ. ಬಿಹಾರದ ಗಯಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ರಿವಾಲ್ವರ್ ಕೈಗೆ ಸಿಕ್ಕ ಮಕ್ಕಳು ಒಬ್ಬರಿಗೊಬ್ಬರು ಗುರಿ ಇಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಹಾರದ ಔರಂಗಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಸುಶೀಲ್ ಸಿಂಗ್ ಭದ್ರತೆಗೆ ನಿಯೋಜನೆಗೊಂಡಿದ್ದ ಗಾರ್ಡ್ ಇಂತಹ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಇಲ್ಲಿನ ತಿಕಾರಿ ರಾಜ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಸಂಸದ ಸುಶೀಲ್ ಸಿಂಗ್, ಬಿಜೆಪಿ ರಾಜಾಧ್ಯಕ್ಷ ನಿತ್ಯಾನಂದ ರೈ ಬಂದಿದ್ದರು. ಈ ವೇಳೆ ಇಲ್ಲಿದ್ದ ಮಕ್ಕಳ ಜೊತೆ ಸಂಸದರ ಭದ್ರತಾ ಪೊಲೀಸ್ ಕ್ರಿಕೆಟ್ ಆಡಿದ್ದಾರೆ.
ತಮ್ಮ ಸರ್ವೀಸ್ ರಿವಾಲ್ವರ್ ಅನ್ನು ಮಕ್ಕಳ ಕೈ ಗೆ ಕೊಟ್ಟು ಪೊಲೀಸ್ ಗಾರ್ಡ್ ಬ್ಯಾಟ್ ಹಿಡಿದಿದ್ದಾರೆ. ಇತ್ತ, ಮಕ್ಕಳು ತಮ್ಮ ಕೈಗೆ ಸಿಕ್ಕ ರಿವಾಲ್ವರ್ ಅನ್ನು ಒಬ್ಬರಿಗೊಬ್ಬರು ಗುರಿ ಇಟ್ಟುಕೊಂಡಿದ್ದಾರೆ. ಅದೃಷ್ಟವಶಾತ್ ಈ ವೇಳೆ ಯಾವುದೇ ಅನಾಹುತ ನಡೆದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.