
ಬೆಂಗಳೂರು : ಓಲಾ ಕ್ಯಾಬ್’ನಲ್ಲಿ ನೀವು ಪ್ರಯಾಣ ಮಾಡುತ್ತೀರಾ ಹಾಗಾದ್ರೆ ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್. ಓಲಾ ಕ್ಯಾಬ್’ನಲ್ಲಿ ಪ್ರಯಾಣಿಸುವವರಿಗೆ ಟ್ರಿಪ್ ಇನ್ಶುರೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ಅವರು ಸೇವೆಯನ್ನು ಪಡೆದದ್ದಕ್ಕೆ ಇನ್ಸುರೆನ್ಸ್ ಮೊತ್ತವಾಗಿ 1 ರು. ಪಾವತಿಸಬೇಕಾಗುತ್ತದೆ.
ಓಲಾ ಜೊತೆಗೆ ಪಾಲುದಾರರಾಗಿ ಅಕೊ ಜನರಲ್ ಇನ್ಶುರೆನ್ಸ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸುರೆನ್ಸ್ ಮೂಲಕ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಒಟ್ಟು 110 ನಗರಗಳಲ್ಲಿ ಈ ವ್ಯವಸ್ಥೆ ಲಭ್ಯವಿರಲಿದೆ.
ಈಗಾಗಲೇ ಕಂಪನಿಯು ಓಲಾ ಡ್ರೈವರ್ ಪಾರ್ಟನರ್’ಗಳಿಗೆ ವಿಮಾ ಯೋಜನೆಯನ್ನು ಜಾರಿ ಮಾಡಿದೆ. 5 ಲಕ್ಷದವರೆಗೆ ಇನ್ಶುರೆನ್ಸ್ ಮೊತ್ತವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.