500 ರೂಪಾಯಿ ಹಳೆ ನೋಟಿನಿಂದ ವಿದ್ಯುತ್ ಉತ್ಪಾದಿಸಿದ ವಿದ್ಯಾರ್ಥಿ: PMO ಗಮನಸೆಳೆದ ಆವಿಷ್ಕಾರ!

Published : May 23, 2017, 11:37 AM ISTUpdated : Apr 11, 2018, 12:45 PM IST
500 ರೂಪಾಯಿ ಹಳೆ ನೋಟಿನಿಂದ ವಿದ್ಯುತ್ ಉತ್ಪಾದಿಸಿದ ವಿದ್ಯಾರ್ಥಿ: PMO ಗಮನಸೆಳೆದ ಆವಿಷ್ಕಾರ!

ಸಾರಾಂಶ

ಒಡಿಶಾದ ವಿದ್ಯಾರ್ಥಿಯೊಬ್ಬ 500 ರೂಪಾಯಿಯ ಹಳೆ ನೋಡುಗಳಿಂದ ವಿದ್ಯುತ್ ಉತ್ಪಾದಿಸುವ ವಿಚಾರವಾಗಿ ಚರ್ಚೆಯಲ್ಲಿದ್ದಾನೆ. ನುವಾಪಾದ ಜಿಲ್ಲೆಯ 17 ವರ್ಷದ ವಿದ್ಯಾರ್ಥಿಯೊಬ್ಬ ಹಳೆಯ 500 ರೂಪಾಯಿ ನೋಟುಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರ ತನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾನೆ. ಈತನ ಈ ಆವಿಷ್ಕಾರದ ಸುದ್ದಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ತಲುಪಿದೆ.

ಒಡಿಶಾ(ಮೇ.23): ಒಡಿಶಾದ ವಿದ್ಯಾರ್ಥಿಯೊಬ್ಬ 500 ರೂಪಾಯಿಯ ಹಳೆ ನೋಡುಗಳಿಂದ ವಿದ್ಯುತ್ ಉತ್ಪಾದಿಸುವ ವಿಚಾರವಾಗಿ ಚರ್ಚೆಯಲ್ಲಿದ್ದಾನೆ. ನುವಾಪಾದ ಜಿಲ್ಲೆಯ 17 ವರ್ಷದ ವಿದ್ಯಾರ್ಥಿಯೊಬ್ಬ ಹಳೆಯ 500 ರೂಪಾಯಿ ನೋಟುಗಳಿಂದ ವಿದ್ಯುತ್ ಉತ್ಪಾದಿಸುವ ತಂತ್ರ ತನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾನೆ. ಈತನ ಈ ಆವಿಷ್ಕಾರದ ಸುದ್ದಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ತಲುಪಿದೆ.

ಇಲ್ಲಿನ ಕರಿಯರ್ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಲಕ್ಷ್ಮಣ್ ದುಂಡಿ ಎಂಬ ವಿದ್ಯಾರ್ಥಿಯೇ 500 ರೂಪಾಯಿ ಹಳೆ ನೋಟುಗಳಿಂದ ವಿದ್ಯುತ್ ತಯಾರಿಸುವುದಾಗಿ ಹೇಳಿಕೊಂಡವನು. ಈತ ಕೇವಲ ಒಂದು ನೋಟಿನಿಂದ 5 ವೋಲ್ಟ್ ವಿದ್ಯುತ್ ತಯಾರಿಸುತ್ತಾನಂತೆ. ಈತನ ಈ ಆವಿಷ್ಕಾರದ ವಿಚಾರ ಪ್ರಧಾನ ಮಂತ್ರಿ ಕಾರ್ಯಾಲಯವನ್ನೂ ತಲುಪಿದೆ. ಸದ್ಯ ಒಡಿಶಾದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಿಂದ ಈ ಪ್ರಾಜೆಕ್ಟ್'ಗೆ ಸಂಬಂಧಿಸಿದ ವರದಿ ನೀಡಲು ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದ.

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಲಕ್ಷ್ಮಣ್ ವಿದ್ಯುತ್ ಉತ್ಪಾದಿಸಲು 500 ರೂಪಾಯಿ ಹಳೆ ನೋಟಿನಲ್ಲಿರುವ ಸಿಲಿಕಾನ್ ಕೋಟಿಂಗ್'ನ್ನು ಬಳಸುತ್ತಾನೆ ಎಂದು ತಿಳಿದು ಬಂದಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಲಕ್ಞ್ಮಣ್ ನೋಟುಗಳನ್ನು ಹರಿದರಷ್ಟೇ ಈ ಕೋಟ್ ಕಾಣಿಸಿಕೊಳ್ಳುತ್ತದೆ. ಬಳಿಕ ಈ ಕೋಟಿಂಗ್'ನ್ನು ಬಿಸಿಲಿಗೆ ಒಣಗಿಸಬೇಕು. ತದನಂತರ ಇದನ್ನು ಒಂದು ವಿದ್ಯುತ್ ತಂತಿಯ ಸಹಾಯದಿಂದ ಟ್ರಾನ್ಸ್ಫರ್ಮರ್'ಗೆ ಜೋಡಿಸುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದ್ದಾನೆ.

ಈಗಾಗಲೇ ಈ ವಿದ್ಯಾರ್ಥಿ ಒಂದು ಟ್ರಾನ್ಸ್ಫರ್'ಮರ್ ತಯಾರಿಸಿದ್ದು, ಇದು ಸಿಲಿಕಾನ್ ಪ್ಲೇಟ್'ನಿಂದ ಉತ್ಪಾದನೆಯಾದ ವಿದ್ಯುತ್'ನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುವುದಾಗಿ ತಿಳಿದು ಬಂದಿದೆ. ಇನ್ನು ಪ್ರಧಾನಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಕುರಿತಾಗಿ ಮಾತನಾಡಿದ ಲಕ್ಞ್ಮಣ್ ಒಂದು ವೇಳೆ ಪ್ರಧಾನಿ ಕಾರ್ಯಾಲಯಕ್ಕೆ ನನ್ನ ಈ ಆವಿಷ್ಕಾರ ಇಷ್ಟವಾದರೆ ಅದಕ್ಕಿಂತ ಹೆಚ್ಚಿನ ಗೌರವ ಬೇರೊಂದಿಲ್ಲ ನೋಟ್ ಬ್ಯಾನ್ ಬಳಿಕ 500 ರೂಪಾಯಿಯ ಹಳೆ ನೋಟುಗಳು ಉಪಯೋಗಕ್ಕಿಲ್ಲದೆ ಮೂಲೆ ಸೇರಿವೆ. ಹೀಗಿರುವಾಗ ಇವುಗಳಿಂದ ವಿದ್ಯುತ್ ತಯಾರಿಸಿದರೆ ಸರ್ಕಾರಕ್ಕೆ ಲಾಭವಾಗಲಿದೆ ಎಂದಿದ್ದಾನೆ. ಈಗಾಗಲೇ ಈ ವಿದ್ಯಾರ್ಥಿ ತನ್ನ ಈ ಆವಿಷ್ಕಾರವನ್ನು ಕಾಲೇಜಿನಲ್ಲಿ ಪ್ರದರ್ಶಿಸಿದ್ದಾನೆ ಎಂಬ ಮಾತುಗಳೂ ಕೇಳಿ ಬಂದಿವೆ. ಈತ ಈ ಆವಿಷ್ಕಾರವನ್ನು ಕೇವಲ 15 ದಿನಗಳಲ್ಲಿ ಮಾಡಿದ್ದನಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ