ದೆಹಲಿಯಲ್ಲಿ ಮಿತಿ ಮೀರಿದೆ ವಾಯುಮಾಲಿನ್ಯ; ಸೋಮವಾರದಿಂದ ಸಮ-ಬೆಸ ಯೋಜನೆ ಜಾರಿ

By Suvarna Web DeskFirst Published Nov 9, 2017, 8:31 PM IST
Highlights

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು, ಅದನ್ನು ತಗ್ಗಿಸಲು ದೆಹಲಿ ಸರ್ಕಾರ ಮುಂದಾಗಿದೆ. ಸೋಮವಾರದಿಂದ ಸಮ-ಬೆಸ ಯೋಜನೆಯನ್ನು 5 ದಿನಗಳ ಕಾಲ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲಾತ್ ಹೇಳಿದ್ದಾರೆ.

ನವದೆಹಲಿ (ನ.09): ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು, ಅದನ್ನು ತಗ್ಗಿಸಲು ದೆಹಲಿ ಸರ್ಕಾರ ಮುಂದಾಗಿದೆ. ಸೋಮವಾರದಿಂದ ಸಮ-ಬೆಸ ಯೋಜನೆಯನ್ನು 5 ದಿನಗಳ ಕಾಲ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲಾತ್ ಹೇಳಿದ್ದಾರೆ.

ಸೋಮವಾರದಿಂದ 5 ದಿನಗಳ ಕಾಲ ಸಮ-ಬೆಸ ವಾಹನ ಯೋಜನೆ ಜಾರಿಯಾಗಲಿದೆ. ಈ 5 ದಿನಗಳ ಕಾಲ ಸಂಪೂರ್ಣ ಸಹಕಾರ ನೀಡುವಂತೆ ಕೈಲಾಶ್ ಗೆಹ್ಲಾಟ್ ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ. ಓಲಾ ಮತ್ತು ಊಬರ್'ಗಳ  ಬೆಲೆಯನ್ನು ಹೆಚ್ಚು ಮಾಡುವುದಿಲ್ಲ. ಬೆಲೆ ಎಂದಿನಂತೆ ಇರಲಿದೆ ಎಂದು ಭರವಸೆ ನೀಡಿದ್ದಾರೆ.

ಸಿಎನ್'ಜಿ ವಾಹನಗಳು, ಎಲೆಕ್ಟ್ರಿಕ್ ವಾಹನಗಳು, ಹೈಬ್ರೀಡ್ ವಾಹನಗಳು, 12 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವ ಮಹಿಳಾ ಬೈಕ್'ಗಳಿಗೆ ಸಮ-ಬೆಸ ಯೋಜನೆಗಳಿಂದ ವಿನಾಯಿತಿ ನೀಡಲಾಗಿದೆ.

ನಾಳೆಯಿಂದ ದೆಹಲಿಯಾದ್ಯಂತ ಎಲ್ಲಾ 22 ಸಿಎನ್'ಜಿ ಸ್ಟೇಷನ್'ಗಳಲ್ಲಿ ಐಜಿಎಲ್ (ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್) ಸ್ಟಿಕ್ಕರ್'ಗಳು ಲಭ್ಯವಾಗಲಿದೆ. ಹೆಚ್ಚುವರಿ ಬಸ್'ಗಳನ್ನು ಕೂಡಾ ನಿಯೋಜಿಸಲಾಗಿದೆ ಎಂದು ಕೈಲಾಶ್ ಗೆಹ್ಲಾಟ್ ಹೇಳಿದ್ದಾರೆ.

click me!