ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ; ಜೀವನ್ಮರಣದ ಮಧ್ಯೆ ರೋಗಿಗಳ ಹೋರಾಟ

By Suvarna Web DeskFirst Published Nov 9, 2017, 6:29 PM IST
Highlights

ಜಿಲ್ಲಾ ಆಸ್ಪತ್ರೆಯಲ್ಲಿ ಅಮ್ಲಜನಕದ ಕೊರತೆಯಿಂದ ರೋಗಿಗಳು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ.

ಚಾಮರಾಜನಗರ (ನ.09): ಜಿಲ್ಲಾ ಆಸ್ಪತ್ರೆಯಲ್ಲಿ ಅಮ್ಲಜನಕದ ಕೊರತೆಯಿಂದ ರೋಗಿಗಳು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ.

ಕಳೆದ ಮೂರು ತಿಂಗಳಿಂದ ಜಿಲ್ಲಾಸ್ಪತ್ರೆ ಸರಿಯಾಗಿ ಆಕ್ಸಿಜನ್ ಸರಬರಾಜು ಆಗುತ್ತಿಲ್ಲ. ಹೀಗಾಗಿ ರೋಗಿಗಳು ಮನೆಯಲ್ಲಿ ಬಳಸುತ್ತಿದ್ದ ಆಕ್ಸಿಜನ್ ಸಿಲಿಂಡರ್ ಅನ್ನೇ ಆಸ್ಪತ್ರೆಯಲ್ಲಿ ಬಳಕೆ ಮಾಡುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಕಳೆದ ಐದು ದಿನಗಳ ಹಿಂದೆ ಚಂದ್ರಮ್ಮ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.  ಒಂದು ಸಣ್ಣದೊಂದು ಆಕ್ಸಿಜನ್ ಸಿಲಿಂಡರ್'ನಲ್ಲಿ  ಆಮ್ಲಜನಕ ಪೂರೈಕೆ ಮಾಡಿದ್ದಾರೆ.  ಭಾನುವಾರವೇ ಸಿಲಿಂಡರ್ ಮುಕ್ತಾಯವಾಗಿದೆ. ಅಷ್ಟೊತ್ತಿಗೆ  ಚಂದ್ರಮ್ಮ  ಸ್ಥಿತಿ ಗಂಭೀರವಾಗತೊಡಗಿದೆ. ಈ ವೇಳೆ ಚಂದ್ರಮ್ಮ ಪತಿ ಪುಟ್ಟನಂಜಶೆಟ್ಟಿ ಮನೆಯಲ್ಲಿ ಉಪಯೋಗಿಸುತ್ತಿದ್ದ ಆಕ್ಸಿಜನ್ ಸಿಲಿಂಡರ್ ತಂದು ಆಕ್ಸಿಜನ್ ಪೂರೈಕೆ ಮಾಡುತ್ದಿದ್ದಾರೆ.

ಕಳೆದ ಮೂರು ದಿನಗಳಿಂದ ಸ್ವಂತ ಸಿಲಿಂಡರ್ ಬಳಕೆ ಮಾಡುತ್ತಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ನನ್ನ ಚಂದ್ರಮ್ಮಗೆ ಪೂರೈಸುತ್ತಿಲ್ಲ. ಇಷ್ಟಕ್ಕೆಲ್ಲ  ಕಾರಣ  ಜಿಲ್ಲಾಸ್ಪತ್ರೆಯಲ್ಲಿ  ಆಕ್ಸಿಜನ್ ಇಲ್ಲದೇ ಇರುವುದು. ಆಕ್ಸಿಜನ್ ಪೂರೈಕೆ ಮಾಡುವ ಗುತ್ತಿಗೆದಾರನಿಗೆ ಅಸ್ಪತ್ರೆಯಿಂದ ಬಾಕಿ ಹಣ ನೀಡದೇ ಇರುವುದರಿಂದ  ಆಕ್ಸಿಜನ್ ಪೂರೈಕೆ ಮಾಡಿಲ್ಲ. ಹೀಗಾಗಿ ಕಳೆದ ಮೂರು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದೆ.  ಜಿಲ್ಲಾಸ್ಪತ್ರೆ ಉಸ್ತುವಾರಿ ಹೊತ್ತಿರುವ ಡೀನ್ ಅಸ್ಪತ್ರೆಯತ್ತ  ಕಡೆ ತಲೆ ಹಾಕದೇ ಇರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮೆಡಿಕಲ್ ಕಾಲೇಜಿನ ಬಗ್ಗೆ ಮಾತ್ರ ಗಮನ ಹರಿಸುವ ಡೀನ್ ಚಂದ್ರಶೇಖರ್ ಜಿಲ್ಲಾಸ್ಪತ್ರೆಯ ಸಮಸ್ಯೆಗಳ ಬಗೆ ತಲೆ ಹಾಕುತ್ತಿಲ್ಲ.

click me!