ಆರ್ಥಿಯೋ ಆರ್ಥೈಟಿಸ್ ರೋಗಿಗಳಿಗೆ ಅ.15 ರಂದು ಒಎಸಿಒನ್ ಸಮ್ಮೇಳನ

By Suvarna Web DeskFirst Published Oct 12, 2017, 8:02 PM IST
Highlights

ಆಯುರ್ವೇದ  ಮತ್ತು ಅಲೋಪತಿ ಪರಿಣಿತರು ಒಂದೇ ವೇದಿಕೆಯಡಿ ಸೇರುವ ವಿನೂತನ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಬೆಂಗಳೂರು (ಅ.12): ಆಯುರ್ವೇದ  ಮತ್ತು ಅಲೋಪತಿ ಪರಿಣಿತರು ಒಂದೇ ವೇದಿಕೆಯಡಿ ಸೇರುವ ವಿನೂತನ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಮೊಟ್ಟ ಮೊದಲ ಬಾರಿಗೆ ಆರ್ಥೊಪೀಡಿಕ್ ಸರ್ಜನ್ನರು, ರುಮಾಟಾಲಜಿಸ್ಟರು, ಜೆನೆಟಿಸಿಸ್ಟ್, ಯೋಗ ಥೆರಪಿಸ್ಟ್’ಗಳು, ನ್ಯಾಚುರೋಪತಿ ಥೆರಪಿಸ್ಟ್’ಗಳು, ಆಯುರ್ವೇದಿಕ್ ಕನ್ಸಲ್ಟೆಂಟ್’ಗಳು, ರೇಡಿಯೋಜಿಸ್ಟರು, ಫಿಸಿಯೋಥೆರಪಿಸ್ಟರು ಮತ್ತು ಪೇಯ್ನ್ ಕನ್ಸಲ್’ಟೆಂಟ್’ಗಳು ಕೈ ಜೊಡಿಸುವ ಮೂಲಕ ಆರ್ಥಿಯೋ ಆರ್ಥೈಟಿಸ್’ನಿಂದ ಭಾಧಿತರಾದವರ ಸಂಕಷ್ಟ ನಿವಾರಣೆಗೆ ಸಜ್ಜಾಗಿದ್ದಾರೆ.

ಆಘಾತಕಾರಿ ಅಂಶವೆಂದರೆ 30-50 ರ ವಯೋಮಾನದವರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ವೃದ್ಧರಿಗೆ ಕಾಡುವ  ಈ ಸಮಸ್ಯೆ ಮುಖ್ಯವಾಗಿ ಮಹಿಳೆಯರನ್ನು ಬಾಧಿಸುತ್ತಿದೆ. ಅದಕ್ಕೆ ವೈದ್ಯಕೀಯ ಜಗತ್ತಿನಲ್ಲಿ ಹಲವು ಔಷಧಿಗಳಿವೆ. ಆದರೆ ಅಷ್ಟು ಪ್ರಯೋಜನವಾಗಿಲ್ಲ. ಆಯುರ್ವೇದ ಮತ್ತು ಅಲೋಪತಿ ಪರಸ್ಪರ ಬೆರೆಯುವುದಿಲ್ಲ ಎಂಬ ನಂಬಿಕೆಯಿದೆ.

ಮೊಣಕಾಲಿನ ಚಿಕಿತ್ಸೆ ನೀಡಲು ಏಕೀಕೃತ ವಿಧಾನ ನಮಗೆ ಸಾಧ್ಯವೇ? ಇಲ್ಲಿ ಒಎಸಿಒನ್ ಪ್ರಸ್ತುತವಾಗುತ್ತದೆ. ಈ ವಾರ್ಷಿಕ ಸಮ್ಮೇಳನದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ  ಖ್ಯಾತಿಯ ಯುರ್ವೇದ ಪರಿಣಿತರಿಂದ ಯೋಹ ಥೆರಪಿಸ್ಟ್’ಗಳವರೆಗೆ ಭಾಗವಹಿಸಲಿದ್ದಾರೆ. ಈ ವರ್ಷ ಒಎಸಿಒನ್ ಬೆಂಗಳೂರಿನ ಪೀಪಲ್ ಟ್ರೀ ಹಾಸ್ಪಿಟಲ್’ನಲ್ಲಿ ಅಕ್ಟೋಬರ್ 15 ರಂದು ನಡೆಯಲಿದೆ. ವಿವಿಧ ಕ್ಷೇತ್ರದ ಪರಿಣಿತರು ಒಂದೇ ಸೂರಿನಡಿ ಸೇರಿ ಚರ್ಚೆಗಳು, ವಿಷಯ ಮಂಡನೆ, ಪ್ರಬಂಧ ಮಂಡನೆ, ಕಾರ್ಯಾಗಾರ ಇತ್ಯಾದಿ ನಡೆಯಲಿವೆ. ಆಸಕ್ತರು ಭಾಗವಹಿಸಲು ಕೋರಿದೆ.  

click me!