ಚುನಾವಣಾ ಆಯೋಗದ ಮೇಲೆ ಮೋದಿ ಸರ್ಕಾರ ಒತ್ತಡ ಹೇರಿದೆ: ಕಾಂಗ್ರೆಸ್ ಟೀಕೆ

By Suvarna Web DeskFirst Published Oct 12, 2017, 6:13 PM IST
Highlights

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ದಿನವನ್ನು ನಿಗದಿಪಡಿಸಿದ ಚುನಾವಣಾ ಆಯೋಗ ಇನ್ನೂ ಗುಜರಾತ್ ಚುನಾವಣಾ ದಿನಾಂಕವನ್ನು ನಿಗದಿಪಡಿಸದೇ ಇದ್ದುದ್ದಕ್ಕೆ ಕಾಂಗ್ರೆಸ್ ಟೀಕಿಸಿದೆ. ಗುಜರಾತ್ ಚುನಾವಣೆಯನ್ನು  ವಿಳಂಬ ಮಾಡುವಂತೆ  ಮೋದಿ ಸರ್ಕಾರ ಚುನಾವಣಾ ಆಯೋಗದ ಮೇಲೆ  ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ನವದೆಹಲಿ (ಅ.12): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ದಿನವನ್ನು ನಿಗದಿಪಡಿಸಿದ ಚುನಾವಣಾ ಆಯೋಗ ಇನ್ನೂ ಗುಜರಾತ್ ಚುನಾವಣಾ ದಿನಾಂಕವನ್ನು ನಿಗದಿಪಡಿಸದೇ ಇದ್ದುದ್ದಕ್ಕೆ ಕಾಂಗ್ರೆಸ್ ಟೀಕಿಸಿದೆ. ಗುಜರಾತ್ ಚುನಾವಣೆಯನ್ನು  ವಿಳಂಬ ಮಾಡುವಂತೆ  ಮೋದಿ ಸರ್ಕಾರ ಚುನಾವಣಾ ಆಯೋಗದ ಮೇಲೆ  ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ದಿನಾಂಕವನ್ನು ಇಂದು ನಿಗದಿಪಡಿಸುವುದಾಗಿ ಚುನಾವಣಾ ಆಯೋಗ ತಿಳಿಸಿತ್ತು. ಆದರೆ ಹಿಮಾಚಲ ಪ್ರದೇಶವೊಂದರದ್ದೇ ಘೋಷಣೆ ಮಾಡಿದೆ. ಗುಜರಾತ್ ಚುನಾವಣಾ ದಿನಾಂಕವನ್ನು ಪ್ರತ್ಯೇಕವಾಗಿ ಘೋಷಿಸುವುದಾಗಿ ಹೇಳಿದೆ. ಡಿ. 18 ರೊಳಗೆ ನಡೆಸುವ ಸಾಧ್ಯತೆಯಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎ ಕೆ ಜೋತಿ ಹೇಳಿದ್ದಾರೆ. ಚುನಾವಣಾ ಆಯೋಗದ  ನಡೆಯನ್ನು ಕಾಂಗ್ರೆಸ್ ಟೀಕಿಸಿದೆ. ಮೋದಿ ಸರ್ಕಾರ ಪಿತೂರಿ ಮಾಡಿದೆ. ಗುಜರಾತ್ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಎಸ್ ಸರ್ಜೇವಾಲಾ ಆರೋಪಿಸಿದ್ದಾರೆ.

click me!