ದಾವಣಗೆರೆಯಲ್ಲಿ ಸ್ಟಾಫ್ ನರ್ಸ್ ನಿಗೂಢ ಸಾವು: ಹಲವು ಅನುಮಾನಗಳಿಗೆ ಕಾರಣವಾಗಿರುವ ಡೆತ್‌'ನೋಟ್‌

Published : Jul 10, 2017, 08:54 AM ISTUpdated : Apr 11, 2018, 12:56 PM IST
ದಾವಣಗೆರೆಯಲ್ಲಿ ಸ್ಟಾಫ್ ನರ್ಸ್ ನಿಗೂಢ ಸಾವು: ಹಲವು ಅನುಮಾನಗಳಿಗೆ ಕಾರಣವಾಗಿರುವ ಡೆತ್‌'ನೋಟ್‌

ಸಾರಾಂಶ

ದಾವಣಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟ್ಯಾಫ್​ ನರ್ಸ್​ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿನ ಹಿಂದೆ ಕಾಣದ ಪ್ರಭಾವಿಗಳ ಕೈವಾಡವಿದೆ ಎಂಬ ಸಂಶಯ ಕಾಡುತ್ತಿದೆ. ಹಲವು ಅನುಮಾನಗಳಿಗೆ ಎಡೆ ಮಾಡಿರುವ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ.

ದಾವಣಗೆರೆ(ಜು.10): ದಾವಣಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟ್ಯಾಫ್​ ನರ್ಸ್​ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿನ ಹಿಂದೆ ಕಾಣದ ಪ್ರಭಾವಿಗಳ ಕೈವಾಡವಿದೆ ಎಂಬ ಸಂಶಯ ಕಾಡುತ್ತಿದೆ. ಹಲವು ಅನುಮಾನಗಳಿಗೆ ಎಡೆ ಮಾಡಿರುವ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ.

55 ವರ್ಷದ ಗಿರಿಜಮ್ಮ ಕಳೆದ 15 ವರ್ಷಗಳಿಂದ ತ್ಯಾವಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟ್ಯಾಫ್​ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಚನ್ನಾಗೇ ಇದ್ದ ಗಿರಿಜಮ್ಮ ತಮ್ಮ ಮನೆಯಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದ ಗಿರಿಜಮ್ಮ ಬೆಳಗ್ಗೆ ಹೆಣವಾಗಿದ್ದಾರೆ. ಗಿರಿಜಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗುತ್ತಿದೆ.

ಕಳೆದ ಐದಾರು ತಿಂಗಳನಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರು ಹಾಗೂ ಗಿರಿಜಮ್ಮ ನ ನಡುವೆ ಕೆಲಸದ ವಿಷಯವಾಗಿ ವೈಮನಸ್ಸಿತ್ತು. ಈ ಬಗ್ಗೆ ಗಿರಿಜಮ್ಮ ತಮ್ಮ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಅಧಿಕಾರಿಗಳು ಕಳೆದ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಶಾ ಕಾರ್ಯಕರ್ತರೊಂದಿಗಿನ ನಡವಳಿಕೆಗಳ ಬಗ್ಗೆ ಸಂಧಾನ ಮಾಡಿದ್ದರು. ಇದೇ ವೈಮನಸ್ಸಿನಿಂದ ಬೇಸತ್ತ ಗಿರಿಜಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.  

ಗಿರಿಜಮ್ಮ ಸಾಯುವ ಮುನ್ನ ಡೆತ್ ನೋಟ್ ನ್ನು ಬರೆದಿದ್ದು ಅದರಲ್ಲಿ ಕೆಲ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಹೆಸರುಗಳಿವೆ ಎಂದೂ ಹೇಳಲಾಗುತ್ತಿದೆ. ಪತಿಯನ್ನು ಬೆದರಿಸಿ ಸಹಜ ಸಾವು ಎಂದು ಬಿಂಬಿಸುತ್ತಿದ್ದಾರೆ ಎಂದೂ ಸಂಬಂಧಿಕರು ಆರೋಪಿಸುತ್ತಿದ್ದಾರೆ. ತನಿಖೆಯಿಂದಷ್ಟೇ ಗಿರಿಜಮ್ಮ ಸಾವಿನ ಸತ್ಯ ಬಯಲಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!