ಆಸ್ಪತ್ರೆಯ ಮೆಡಿಕಲ್ ಶಾಪ್'ನಿಂದ ಖರೀದಿಸಿದ ಡ್ರಿಪ್ಸ್ ಬಾಟಲ್‌'ನಲ್ಲಿ ಹುಳುಗಳು!

Published : Jul 10, 2017, 08:38 AM ISTUpdated : Apr 11, 2018, 12:45 PM IST
ಆಸ್ಪತ್ರೆಯ ಮೆಡಿಕಲ್ ಶಾಪ್'ನಿಂದ ಖರೀದಿಸಿದ ಡ್ರಿಪ್ಸ್ ಬಾಟಲ್‌'ನಲ್ಲಿ ಹುಳುಗಳು!

ಸಾರಾಂಶ

ಮೆಡಿಕಲ್​ ಶಾಪ್'​ನವರು ಹುಳ ಬಿದ್ದಿರುವ ಡ್ರಿಪ್ಸ್​ ಬಾಟಲಿಯನ್ನು ನೀಡಿರುವ ಅಘಾತಕಾರಿ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ(ಜು.10): ಮೆಡಿಕಲ್​ ಶಾಪ್'​ನವರು ಹುಳ ಬಿದ್ದಿರುವ ಡ್ರಿಪ್ಸ್​ ಬಾಟಲಿಯನ್ನು ನೀಡಿರುವ ಅಘಾತಕಾರಿ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಜ್ವರದಿಂದ ಬಳಲುತ್ತಿದ್ದ ಶಾಂತಮ್ಮ ಎಂಬುವವರು ದೊಡ್ಡಬಳ್ಳಾಪುರದ ನಂದಿ ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗೆ ದಾಖಲಿಗಿದ್ದರು. ವೈದ್ಯರು ಬರೆದುಕೊಟ್ಟ ಡ್ರೀಪ್ಸ್​ ಬಾಟಲಿಯನ್ನು ಆಸ್ಪತ್ರೆಯ ಮೆಡಿಕಲ್​ ಶಾಪ್​'ನಲ್ಲೇ ಖರೀದಿಸಿದ್ದಾರೆ. ಮೆಡಿಕಲ್​ ಶಾಪ್​'ನವರು ಕೊಟ್ಟ ಬಾಟಲಿ ಒಳಗೆ ಹುಳಗಳಿರುವುದು ಪತ್ತೆಯಾಗಿದೆ.

ಇನ್ನೂ ಗ್ಲೂಕೋಸ್ ಬಾಟಲ್ ಮೇಲೆ ಎಕ್ಸ್ಪಾಯರಿ ಡೇಟ್, ಬ್ಯಾಚ್ ನಂಬರ್ ಕೂಡ ಇರಲಿಲ್ಲ. ರೋಗಿಯ ಸಂಬಂಧಿಕರು ಈ ಬಗ್ಗೆ ಪ್ರಶ್ನಿಸಿದರೆ ಮೆಡಿಕಲ್​ ಶಾಪ್​'ನವರು ಹಾರಿಕೆ ಉತ್ತರ ನೀಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಶಾಂತಮ್ಮ ಸಂಬಂಧಿಕರು ಹಾಗೂ ಕನ್ನಡಪರ ಸಂಘಟನೆಗಳು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿವೆ. ಆರೋಗ್ಯಾಧಿಕಾರಿಗಳು ತನಿಖೆ ನಡೆಸಬೇಕೆಂದು  ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!