ನರ್ಸ್‌ ಜಯಲಕ್ಷ್ಮಿ ಮಹಿಳಾ ಸಬಲೀಕರಣ ಪಕ್ಷಕ್ಕೆ

By Suvarna Web DeskFirst Published Apr 7, 2018, 9:38 AM IST
Highlights

ವಿವಾದಗಳಿಂದಲೇ ಹೆಸರು ಮಾಡಿದ ಬಿಗ್‌ಬಾಸ್‌ ರಿಯಾಲಿಟಿ ಶೋ ಖ್ಯಾತಿಯ ಜಯಲಕ್ಷ್ಮೀ ಅಲಿಯಾಸ್‌ ನರ್ಸ್‌ ಜಯಲಕ್ಷ್ಮೀ ಅವರು ಇದೀಗ ರಾಜಕೀಯ ಪ್ರವೇಶಿಸಿದ್ದು, ಮಹಿಳಾ ಸಬಲೀಕರಣ ಪಕ್ಷಕ್ಕೆ (ಎಂಇಪಿ) ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರು : ವಿವಾದಗಳಿಂದಲೇ ಹೆಸರು ಮಾಡಿದ ಬಿಗ್‌ಬಾಸ್‌ ರಿಯಾಲಿಟಿ ಶೋ ಖ್ಯಾತಿಯ ಜಯಲಕ್ಷ್ಮೀ ಅಲಿಯಾಸ್‌ ನರ್ಸ್‌ ಜಯಲಕ್ಷ್ಮೀ ಅವರು ಇದೀಗ ರಾಜಕೀಯ ಪ್ರವೇಶಿಸಿದ್ದು, ಮಹಿಳಾ ಸಬಲೀಕರಣ ಪಕ್ಷಕ್ಕೆ (ಎಂಇಪಿ) ಸೇರ್ಪಡೆಗೊಂಡಿದ್ದಾರೆ.

ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್‌ ಅವರು ಜಯಲಕ್ಷ್ಮೀ ಅವರಿಗೆ ಹೂ ಗುಚ್ಛ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.

ಸೇರ್ಪಡೆ ಬಳಿಕ ಮಾತನಾಡಿದ ಜಯಲಕ್ಷ್ಮೀ ಅವರು, ನೌಹೀರಾ ಶೇಕ್‌ ಮಾಡಿರುವ ಸಮಾಜ ಮುಖಿ ಕಾರ್ಯಕ್ರಮಗಳಿಂದ ಪ್ರಭಾವಿತಗಳಾಗಿ ಎಂಇಪಿ ಸೇರಿದ್ದೇನೆ ಎಂದರು.

ವಿಧಾನಸಭಾ ಚುನಾವಣೆಗೆ ಪಕ್ಷವು ಟಿಕೆಟ್‌ ನೀಡಿದರೆ ಸ್ಪರ್ಧಿಸಲಿಚ್ಛಿಸಿದ್ದೇನೆ. ನಾನು ಸ್ಪರ್ಧಿಸಲು ಬಯಸುವ ಕ್ಷೇತ್ರಗಳಲ್ಲಿ ಹೊನ್ನಾಳಿ ಕೂಡಾ ಒಂದಾಗಿದ್ದು, ಹೊನ್ನಾಳಿ ನನ್ನ ಕರ್ಮಭೂಮಿ ಕೂಡಾ ಆಗಿದೆ. ಆದರೆ ಈ ವಿಚಾರದಲ್ಲಿ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಇಂದಿನ ರಾಜಕಾರಣಗಳು ಮಾತನಾಡುವ ಭಾಷೆಯನ್ನು ಕೇಳಿದರೆ ಅಸಹ್ಯವಾಗುತ್ತದೆ. ಬದಲಾವಣೆ ಮತ್ತು ಹೊಸತನಕ್ಕಾಗಿ ಮಹಿಳೆಯರು ರಾಜಕೀಯಕ್ಕೆ ಬರಬೇಕು. ರಾಜಕೀಯವನ್ನು ಶುಚ್ಚಿಗೊಳಿಸಬೇಕು ಎಂಬ ಭಾವನೆ ಬಲವಾಗಿ ಬೆಳೆಯಲು ಎಂಇಪಿ ಕಾರಣವಾಗಿದೆ ಎಂದು ಹೇಳಿದರು.

ಕೆಲ ವರ್ಷಗಳ ಹಿಂದೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜತೆ ಚುಂಬನ ವಿವಾದದಿಂದ ಸಾಮಾಜಿಕ ವಲಯದಲ್ಲಿ ಸುದ್ದಿಗೆ ಬಂದ ಜಯಲಕ್ಷ್ಮೇ, ನಂತರ ಧಾರವಾಹಿ ಹಾಗೂ ಚಲನಚಿತ್ರಗಳ ನಟಿಸಿದರು. ಹೀಗೆ ಖ್ಯಾತಿ ಪಡೆದ ಅವರು, ‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಸಹ ಸ್ಪರ್ಧಾಳಾಗಿದ್ದರು. ಈ ವರ್ಣರಂಜಿತ ವ್ಯಕ್ತಿತ್ವದಿಂದಲೇ ಜನಾಕರ್ಷಣೆಯಾಗಿರುವ ಅವರು ವಿಧಾನಸಭಾ ಚುನಾವಣೆ ಕಾವೇರಿರುವ ಹೊತ್ತಿನಲ್ಲಿ ರಾಜಕಾರಣಿ ದಿರಿಸು ಧರಿಸಿದ್ದಾರೆ. ಆದರೆ ಅವರ ಯಾರ ಜಯಾ ಕಸಿಯುತ್ತಾರೆ ಎಂಬುದು ಸದ್ಯದ ಕುತೂಹಲ.

click me!