
ಜಿಮ್ ಕೇಂದ್ರಕ್ಕೆ ಬಂದು ಸಂಪೂರ್ಣ ಬೆತ್ತಲಾಗಿ ಯಾವುದೋ ಯೋಗ ಭಂಗಿಯಲ್ಲಿದ್ದ ವ್ಯಕ್ತಿಯನ್ನು ಕಂಡ ಜಿಮ್ ಓನರ್ ಗೌಹಾರಿದ್ದರು. ನ್ಯೂ ಹ್ಯಂಪಶೈರ್ ನ ಜಿಮ್ ಒಂದು ಇಂಥ ಘಟನೆಗೆ ಸಾಕ್ಷಿಯಾಗಿದ್ದು 34 ವರ್ಷದ ಗಡ್ಡಧಾರಿ ವ್ಯಕ್ತಿಯನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಅಮೆರಿಕದ ಮೆಸಚುಸೆಟ್ಸ್ ನಿವಾಸಿ ನಡೆದುಕೊಂಡೆ ಜಿಮ್ ಗೆ ಬಂದಿದ್ದ. ಬಂದವನೇ ಎಲ್ಲ ಬಟ್ಟೆ ಕಳಚಿ ವ್ಯಾಯಾಮ ಮಾಡಲು ಶುರು ಹಚ್ಚಿಕೊಂಡಿದ್ದ.
ಎರಿಕ್ ಸ್ಟಾಂಗ್ಯೋ ಎಂಬಾತನೀಗ ಪೊಲೀಸರ ಕಸ್ಟಡಿಯಲ್ಲಿದ್ದಾನೆ. judgment-free zone ಎಂಬ ಜಿಮ್ ನ ಟ್ಯಾಗ್ ಲೈನ್ ಅನ್ನು ಈತ ತಪ್ಪಾಗಿ ಭಾವಿಸರಬೇಕು ಎನ್ನಲಾಗಿದೆ. ಒಟ್ಟಿನಲ್ಲಿ ದುರ್ವತನೆ ಆರೋಪದ ಮೇಲೆ ಗಡ್ಡಧಾರಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.