ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಕಣಿವೆಯಲ್ಲಿ ಸಂಪೂರ್ಣವಾಗಿ ತೆರವಾಗದ ನಿಷೇಧಾಜ್ಞೆ| NSA ಅಜಿತ್ ಧೋವಲ್ ಹೇಳಿದರೊಂದು ಕತೆ| ಪಾಕಿಸ್ತಾನದ ಕಳ್ಳಾಟಗಳನ್ನು ಬಯಲು ಮಾಡಿದ ಅಜಿತ್ ಧೋವಲ್| ಭಯೋತ್ಪಾದಕರು, ಪಾಕಿಸ್ತಾನ ಸೇನೆ ನಡುವಿನ ಸಂಭಾಷಣೆ ಹೂರಣ ಬಯಲು ಮಾಡಿದ ಧೋವಲ್| ಆ್ಯಪಲ್ ಟ್ರಕ್, ಬೆಂಗಲ್ಸ್ ಕಳುಹಿಸುವಂತೆ ಭಯೋತ್ಪಾದಕರ ಮನವಿ| ಶಸ್ತ್ರಾಸ್ತ್ರ, ಆಹಾರಕ್ಕಾಗಿ ಭಯೋತ್ಪಾದಕರಿಂದ ಗುಪ್ತ ಸಂಭಾಷಣೆ|
ನವದೆಹಲಿ(ಸೆ.07): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಮ್ಮು ಭಾಗದಲ್ಲಿ ನಿಷೇಧಾಜ್ಞೆ ತೆರವುಗೊಳಿಸಲಾಗಿದ್ದರೂ, ಕಾಶ್ಮೀರದ ಕೆಲವೆಡೆ ಇನ್ನೂ ನಿಷೇಧಾಜ್ಞೆ ಮುಂದುವರೆದಿದೆ.
ಈ ಮಧ್ಯೆ ನಿಷೇಧಾಜ್ಞೆ ಸಂಪೂರ್ಣ ತೆರವುಗೊಳಿಸುವ ಕುರಿತು ಮಾತನಾಡಿರುವ ರಾಷ್ಟ್ರೀಯ ಭದ್ರತಾ ಸಲೆಹಗಾರ ಅಜಿತ್ ಧೋವಲ್, ಕಣಿವೆಯಲ್ಲಿ ಪಾಕಿಸ್ತಾನ ತನ್ನ ಹಸ್ತಕ್ಷೇಪ ನಿಲ್ಲಿಸುವವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
undefined
ವಿಶೇಷ ಸ್ಥಾನಮಾನ ರದ್ದತಿ ಬಳಿಕ ಪಾಕಿಸ್ತಾನ ಕಣಿವೆಯಲ್ಲಿ ತನ್ನ ಹಸ್ತಕ್ಷೇಪವನ್ನು ಚುರುಕುಗೊಳಿಸಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಇಂಬು ನೀಡುತ್ತಿದೆ.
ಗಡಿಭಾಗದ ಟವರ್’ಗಳಲ್ಲಿ ಭಯೋತ್ಪಾದಕರ ಮತ್ತು ಪಾಕಿಸ್ತಾನ ಸೇನೆ ನಡುವಿನ ಸಂಭಾಷಣೆ ರೆಕಾರ್ಡ್ ಆಗುತ್ತಿವೆ. ಭಯೋತ್ಪಾದಕರು ಯಾವಾಗ ಆ್ಯಪಲ್ ಟ್ರಕ್ (ಆಹಾರ), ಬೆಂಗಲ್ಸ್(ಶಸ್ತ್ರಾಸ್ತ್ರ) ಕಳುಹಿಸುತ್ತೀರಿ ಎಂದು ಕೋಡ್ ವರ್ಲ್ಡ್’ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂಧದು ಧೋವಲ್ ತಿಳಿಸಿದ್ದಾರೆ.
ಪಾಕಿಸ್ತಾನದ ಈ ಕಳ್ಳಾಟ ನಿಲ್ಲುವವರೆಗೂ ನಾವು ನಿಷೇಧಾಜ್ಞೆ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅಜಿತ್ ಧೋವಲ್ ಈ ವೇಳೆ ಸ್ಪಷ್ಟಪಡಿಸಿದರು.