ತಮಿಳುನಾಡು ರಾಜಕೀಯದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ

Published : Feb 08, 2017, 04:57 PM ISTUpdated : Apr 11, 2018, 12:54 PM IST
ತಮಿಳುನಾಡು  ರಾಜಕೀಯದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ

ಸಾರಾಂಶ

ಪನ್ನೀರ್ ಸೆಲ್ವಂ ತಾನು ಬಹುಮತ ಸಾಬೀತು ಪಡಿಸಲು ಸಿದ್ಧ ಎಂದು ತೊಡೆತಟ್ಟಿದ ಬೆನ್ನಲ್ಲೇ ಶಶಿಕಲಾ ಅಲರ್ಟ್​ ಆಗಿದ್ದಾರೆ. ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಇವತ್ತು ಸಭೆ ನಡೆಸಿದ ಬೆನ್ನಲ್ಲೇ ಈಗ ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದಾರೆ. ಕುದುರೆ ವ್ಯಾಪಾರದ ಭಯದಲ್ಲಿ  ತನ್ನ ಬೆಂಬಲಿತ ಶಾಸಕರನ್ನು ಬಸ್ ಮೂಲಕ ಅಜ್ಞಾತ ಸ್ಥಳಕ್ಕೆ  ಕಳುಹಿಸಿದ್ದಾರೆ.

ಜಯಲಲಿತ ನಿಧನದ ಬಳಿಕೆ ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ್ಲ ಕಲ್ಲೋಲ ಉಂಟಾಗಿದೆ. ಬರಬ್ಬೋರಿ ಎರಡು ದಶಕಗಳ ನಂತರ ತಮಿಳುನಾಡಿನ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸುರವಾಗಿದೆ. ಅಮ್ಮನ ನಿಧನದ ನಂತರ ಶುರುವಾಗಿರುವ ರಾಜಕೀಯ ಗುದ್ದಾಟ ಬೀದಿಗೆ ಬಿದಿದೆ. ಇನ್ನೂ ತಮಿಳುನಾಡಿನ ಗದ್ದುಗೆ ಏರಲು ನಾ ಮುಂದೆ ನೀ ಮುಂದೆ ಅಂತಾ ಶಶಿಕಲಾ ನಟರಾಜನ್ , ಮಾಜಿ ತಮಿಳುನಾಡಿನ ಮುಖ್ಯಮಂತ್ರಿ ಪನಿರ ಸೆಲ್ವಂ ಮುಂದಾಗಿದ್ದಾರೆ.

ಪನ್ನೀರ್ ಸೆಲ್ವಂ ತಾನು ಬಹುಮತ ಸಾಬೀತು ಪಡಿಸಲು ಸಿದ್ಧ ಎಂದು ತೊಡೆತಟ್ಟಿದ ಬೆನ್ನಲ್ಲೇ ಶಶಿಕಲಾ ಅಲರ್ಟ್​ ಆಗಿದ್ದಾರೆ. ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಇವತ್ತು ಸಭೆ ನಡೆಸಿದ ಬೆನ್ನಲ್ಲೇ ಈಗ ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದಾರೆ. ಕುದುರೆ ವ್ಯಾಪಾರದ ಭಯದಲ್ಲಿ  ತನ್ನ ಬೆಂಬಲಿತ ಶಾಸಕರನ್ನು ಬಸ್ ಮೂಲಕ ಅಜ್ಞಾತ ಸ್ಥಳಕ್ಕೆ  ಕಳುಹಿಸಿದ್ದಾರೆ.

ತಮಿಳುನಾಡಿನ  ಒಟ್ಟು 234 ಸ್ಥಾನಗಳಲ್ಲಿ  ಎಐಎಡಿಎಂಕೆ 134, ಡಿಎಂಕೆ 89 ಸ್ಥಾನಗಳನ್ನು ಗೆದ್ದಿದೆ.  2016ರ ವಿಧಾನಸಭಾ ಚುಣಾವಣೆಯಲ್ಲಿ ಎಐಎಡಿಎಂಕೆ 134 ಸ್ಥಾನಗಳನ್ನು ಗೆದಿದ್ದು. ತಮಿಳುನಾಡಿನಲ್ಲಿ ಬಹುಮತ ಗಳಿಸಲು 118 ಸದಸ್ಯರ ಬೆಂಬಲ ಬೇಕು. ಈಗ  ಪನ್ನೀರ್​​ ಸೆಲ್ವಂಗೆ 16ಕ್ಕಿಂತ ಹೆಚ್ಚು ಶಾಸಕರು ಬೆಂಬಲ ನೀಡಿದರೆ ಸರ್ಕಾರ ಪತನವಾಗಲಿದೆ. ಶಾಸಕತ್ವದ ಅನರ್ಹತೆಯಿಂದ ಪಾರಾಗಲು 90 ಶಾಸಕರು ಬಂಡಾಯ ಏಳಬೇಕು.  ಸದ್ಯ ಪನ್ನೀರ್​ ಸೆಲ್ವಂಗೆ 30 ಶಾಸಕರ ಬೆಂಬಲ ಇದೆ ಅಂತ ಹೇಳಲಾಗ್ತಿದೆ. 90 ಶಾಸಕರ ಬೆಂಬಲ ಸಿಕ್ಕರೂ ಬಹುಮತಕ್ಕೆ 118 ಶಾಸಕರ ಬೆಂಬಲ ಬೇಕು. ಈ  ನಂಬರ್​​ ಗೇಮ್​ ರಾಜಕೀಯದಲ್ಲಿ ಶಶಿಕಲಾ ಮೇಲುಗೈ ಸಾಧ್ಯತೆ ಇದೆ.

ಇನ್ನೂ ಒಂದು ಕುತೂಹಲದ ವಿಚಾರ ಏನಂದರೆ ಸದ್ಯ 30 ಶಾಸಕರ ಬೆಂಬಲ ಹೊಂದಿರೋ ಪನ್ನೀರ್ ಸೆಲ್ವಂ  ಡಿಎಂಕೆಯ 89 ಶಾಸಕರ ಬೆಂಬಲದೊಂದಿಗೂ ಸಿಎಂ ಪಟ್ಟ ಏರಬಹುದು. ಹಾಗೇನೆ ಶಶಿಕಲಾ ಹಿಂದಿರೋ ಶಾಸಕರಲ್ಲಿ 30 ಶಾಸಕರು ಮನಸ್ಸು ಬದಲಿಸಿದರೂ ಶಶಿಕಲಾ ಕನಸು ನುಚ್ಚು ನೂರಾಗುತ್ತೆ.

ಸದ್ಯ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಬಿಕ್ಕಟ್ಟು ಬಗೆಹರಿಸುವಲ್ಲಿ ಗವರ್ನರ್ ವಿದ್ಯಾಸಾಗರ್ ರಾವ್ ನಡೆ ಪ್ರಮಖವಾಗಿದ್ದು. ರಾಷ್ಟ್ರಪತಿ ಆಳ್ವಿಕೆ  ಹೇರಿದರೂ  ಅಚ್ಚರಿಯಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ