ಬಿಜೆಪಿ ಚಿತ್ತ ದೆಹಲಿ, ತಮಿಳುನಾಡಿನತ್ತ?: ಬಿಹಾರದ ಬಳಿಕ ಇನ್ನೆರಡು ರಾಜ್ಯಗಳ ವಶಕ್ಕೆ ಹೊಸ ತಂತ್ರಗಾರಿಕೆ

By Suvarna Web DeskFirst Published Jul 30, 2017, 10:51 AM IST
Highlights

ಬಿಹಾರದ ಮಹಾಘಟಬಂಧನವನ್ನು ಮುರಿದು, ಜೆಡಿಯುವನ್ನು ಎನ್‌ಡಿಎ ಪಾಳೆಯಕ್ಕೆ ಸೆಳೆದ ಬಿಜೆಪಿ ತಂತ್ರಗಾರಿಕೆ ಅಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ. ಆಮ್ ಆದ್ಮಿ ಪಕ್ಷ ಆಳ್ವಿಕೆ ನಡೆಸುತ್ತಿರುವ ದೆಹಲಿ ಹಾಗೂ ಅಣ್ಣಾಡಿಎಂಕೆ ಸರ್ಕಾರವಿರುವ ತಮಿಳುನಾಡಿಗೂ ಅದು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಟನಾ(ಜು.30): ಬಿಹಾರದ ಮಹಾಘಟಬಂಧನವನ್ನು ಮುರಿದು, ಜೆಡಿಯುವನ್ನು ಎನ್‌ಡಿಎ ಪಾಳೆಯಕ್ಕೆ ಸೆಳೆದ ಬಿಜೆಪಿ ತಂತ್ರಗಾರಿಕೆ ಅಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ. ಆಮ್ ಆದ್ಮಿ ಪಕ್ಷ ಆಳ್ವಿಕೆ ನಡೆಸುತ್ತಿರುವ ದೆಹಲಿ ಹಾಗೂ ಅಣ್ಣಾಡಿಎಂಕೆ ಸರ್ಕಾರವಿರುವ ತಮಿಳುನಾಡಿಗೂ ಅದು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

2014ರ ಲೋಕಸಭೆ ಚುನಾವಣೆ ಬಳಿಕ ಮೋದಿ- ಅಮಿತ್ ಶಾ ಸಾರಥ್ಯದಲ್ಲಿ ಬಿಜೆಪಿ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಗೆದ್ದು, ‘ಕಾಂಗ್ರೆಸ್ ಮುಕ್ತ ಭಾರತ’ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ. ಈ ಜೋಡಿಗೆ ತಡೆಯೊಡ್ಡಿದ್ದು ಎರಡು ರಾಜ್ಯಗಳು ಮಾತ್ರ. ಒಂದು ದೆಹಲಿ, ಮತ್ತೊಂದು ಬಿಹಾರ. ಆ ಪೈಕಿ ಬಿಹಾರದಲ್ಲಿ 20 ತಿಂಗಳ ಹಿಂದಿನ ಸೋಲಿನ ಕಹಿ ಮರೆತು, ಜೆಡಿಯುವನ್ನು ಎನ್‌ಡಿಎಗೆ ಸೆಳೆದು ಬಿಜೆಪಿ ಅಧಿಕಾರದ ಸವಿ ಕಾಣುವಲ್ಲಿ ಸಫಲವಾಗಿದೆ.

ಮುಂದಿನ ದಿನಗಳಲ್ಲಿ ಬಿಜೆಪಿಯ ಕಣ್ಣು ಪ್ರಧಾನಿ ನರೇಂದ್ರ ಮೋದಿ ಅವರ ಕಟುಟೀಕಾಕಾರರಾಗಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಆಡಳಿತ ನಡೆಸುತ್ತಿರುವ ದೆಹಲಿ ಮೇಲೆ ಬೀಳುವ ಎಲ್ಲ ಸಾಧ್ಯತೆಗಳೂ ಇವೆ. ಆಮ್ ಆದ್ಮಿ ಪಕ್ಷದ 21 ಶಾಸಕರ ಮೇಲೆ ಅನರ್ಹತೆಯ ತೂಗುಕತ್ತಿ ಇದೆ. ಒಂದು ವೇಳೆ 21 ಶಾಸಕರು ಅನರ್ಹಗೊಂಡರೆ, ಆ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಈಗಲೇ ರಣತಂತ್ರ ಹೆಣೆಯುತ್ತಿದೆ. ಆನಂತರ ಆಪ್‌ನೊಳಗಿನ ಬಂಡಾಯದ ಲಾಭ ಪಡೆಯುವ ಸಂ‘ವವಿದೆ. ಹೀಗಾದಲ್ಲಿ ದೆಹಲಿಯಲ್ಲಿ ಮಧ್ಯಂಯಂತರ ಚುನಾವಣೆ ನಡೆಯುವ ಸಂ‘ವವೂ ಇದೆ ಎಂದು ಹೇಳಲಾಗಿದೆ.

ಮತ್ತೊಂದೆಡೆ, ತಮಿಳುನಾಡಿನಲ್ಲಿ ನೆಲೆ ವಿಸ್ತರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಯಾರಾದರೂ ಅದು ಸಲವಾಗಿಲ್ಲ. ಜಯಲಲಿತಾ ನಿ‘ನದಿಂದಾಗಿ ತಮಿಳುನಾಡಿನಲ್ಲಿ ಸೃಷ್ಟಿಯಾ ಗಿರುವ ನಾಯಕತ್ವ ಶೂನ್ಯ ವಾತಾವರಣದ ಲಾ‘ ಪಡೆಯಲು ಯತ್ನಿಸುವುದು ಬಹುತೇಕ ಖಚಿತ. ಆಡಳಿತಾರೂಢ ಅಣ್ಣಾಡಿಎಂಕೆ ಯಲ್ಲಿನ ಎರಡು ಬಣಗಳ ಕಿತ್ತಾಟವೂ ಬಿಜೆಪಿಗೆ ಪೂರಕವಾಗಿದೆ. ಇದೇ ವೇಳೆ, ಸೂಪರ್‌ಸ್ಟಾರ್ ರಜನೀಕಾಂತ್ ಅವರಿಗೆ ಆಹ್ವಾನ ನೀಡಿರುವ ಬಿಜೆಪಿ, ಸಣ್ಣಪುಟ್ಟ ಪಕ್ಷಗಳನ್ನು ಸೆಳೆಯಲು ಯತ್ನಿಸುತ್ತಿ

 

click me!