ಎಸ್ ಪಿ ಬಾಲಸುಬ್ರಮಣಿಯಂಗೆ ಇಳಯರಾಜ ಲೀಗಲ್ ನೊಟೀಸ್

By Suvarna Web DeskFirst Published Mar 20, 2017, 10:28 AM IST
Highlights

ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಮಣಿಯಂ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜಿಸಿದ ಹಾಡುಗಳನ್ನು ಅವರ ಪೂರ್ವಾನುಮತಿಯಿಲ್ಲದೇ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಹಾಡುವಂತಿಲ್ಲ ಎಂದು ಇಳಯರಾಜ ಕಾನೂನು ಸಲಹೆಗಾರರು ಲೀಗಲ್ ನೋಟಿಸ್ ನೀಡಿದ್ದಾರೆ.

ನವದೆಹಲಿ (ಮಾ.20): ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಮಣಿಯಂ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜಿಸಿದ ಹಾಡುಗಳನ್ನು ಅವರ ಪೂರ್ವಾನುಮತಿಯಿಲ್ಲದೇ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಹಾಡುವಂತಿಲ್ಲ ಎಂದು ಇಳಯರಾಜ ಕಾನೂನು ಸಲಹೆಗಾರರು ಲೀಗಲ್ ನೋಟಿಸ್ ನೀಡಿದ್ದಾರೆ.

ಪ್ರಸ್ತುತ ಬಾಲಸುಬ್ರಮಣಿಯಂ ಅಮೇರಿಕಾ ಪ್ರವಾಸದಲ್ಲಿದ್ದಾರೆ.

ನನಗೆ, ಸಂಗೀತ ಕಚೇರಿ ಆಯೋಜಕರಾದ ಚಿತ್ರಾ, ಚರಣ್ ಗೆ ಇಳಯರಾಜ ಸಂಗೀತ ನಿರ್ದೇಶಿಸಿದ ಹಾಡುಗಳನ್ನು ಅವರ ಪೂರ್ವಾನುಮತಿಯಿಲ್ಲದೇ ಹಾಡುವಂತಿಲ್ಲ ಎಂದು ಇಳಯರಾಜ ಕಡೆ ವಕೀಲರು ಲೀಗಲ್ ನೊಟೀಸ್ ನೀಡಿದ್ದಾರೆ. ಒಂದು ವೇಳೆ ಅವರ ಅನುಮತಿಯಿಲ್ಲದೇ ಹಾಡಿದರೆ ಕಾಪಿರೈಟ್ ಹಕ್ಕಿನ ುಲ್ಲಂಘನೆಯಾಗುತ್ತದೆ. ಅದಕ್ಕಾಗಿ ದೊಡ್ಡ ಮೊತ್ತದ ದಂಡವನ್ನು ಹಾಗೂ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ನನಗೆ ಈ ಕಾನೂನು ಕ್ರಮಗಳ ಬಗ್ಗೆ ಅರಿವಿಲ್ಲ ಎಂದು ಎಸ್ಪಿಬಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮೊದಲೇ ಹೇಳಿದಂತೆ ನನಗೆ ಕಾನೂನಿನ ಬಗ್ಗೆ ಗೊತ್ತಿಲ್ಲ. ಕಾನೂನನ್ನು ಪಾಲಿಸುವುದು ನಮ್ಮ ಕರ್ತವ್ಯ. ಇಂದಿನಿಂದ ನಮ್ಮ ತಂಡ ಇಳಯರಾಜ ಹಾಡುಗಳನ್ನು ಪರ್ಫಾಮ್ ಮಾಡುವುದಿಲ್ಲ.ಆದರೆ ಈಗಾಗಲೇ ನಿಗದಿಯಾದ ಶೋವನ್ನು ರದ್ದುಗೊಳಿಸುವುದಿಲ್ಲ. ಅದು ನಡೆಯುತ್ತದೆ. ನಾನು ಹಾಡಿರುವ ಬೇರೆ ಸಂಗೀತ ನಿರ್ದೇಶಕರ ಹಾಡುಗಳನ್ನು ಇಂದು ಹಾಡುತ್ತೇವೆ. ಎಂದಿನಂತೆ ನೀವು ನಮ್ಮನ್ನು ಹರಸುತ್ತೀರಿ ಎಂದು ನಂಬಿಕೆಯಿದೆ. ನಿಮ್ಮ ಪ್ರೀತಿ, ವಾತ್ಸಲ್ಯಕ್ಕೆ ನಾನು ಋಣಿ ಎಂದು ಎಸ್ಪಿಬಿ ಹೇಳಿದ್ದಾರೆ.

click me!