ಉತ್ತರದೊಂದಿಗೆ ಕರುನಾಡು ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ | ಸಂತ್ರಸ್ತರಿಗೆ ನೆರವು ನೀಡಿದ್ದಾಯ್ತು, ಈಗ ಜಾನುವಾರುಗೂ ಬೇಕು ನೆರವು| ಉತ್ತರ ಕರ್ನಾಟಕದಲ್ಲಿ ಮೇವು ಇಲ್ಲದೇ ಹಸು, ಎಮ್ಮೆ, ದನ, ಪರದಾಟ| ಜಾನುವಾರುಗಳಿಗೆ ಮೇವು ಒದಗಿಸುವ ಬಗ್ಗೆ ಸುವರ್ಣ ನ್ಯೂಸ್ ಕಳಕಳಿ| ಜಾನುವಾರುಗಳಿಗೆ ಬೇಕಿದೆ ಇಂಡಿ, ಬೂಸಾ, ಹುಲ್ಲು, ಜೋಳದ ಕಡ್ಡಿ [ದಂಟು].
ಬೆಂಗಳೂರು\ಬೆಳಗಾವಿ\ಬಾಗಲಕೋಟೆ, [ಆ.10]: ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರವಾಹ ಮಿತಿ ಮೀರಿದ್ದು, ಈ ಎರಡು ಜಿಲ್ಲೆಗಳು ನೀರಿಲ್ಲಿ ಜಲಾವೃತವಾಗಿವೆ. ಜೀವವನ್ನಾದರೂ ಉಳಿಸಿಕೊಳ್ಳುತ್ತೇವೆ ಎಂದು ಉಟ್ಟ ಬಟ್ಟೆಯಲ್ಲೇ ತಮ್ಮ ಊರು, ಮನೆ, ತೋಟ ಎಲ್ಲವನ್ನೂ ಬಿಟ್ಟು ಹೊರಟಿದ್ದು, ಅವರಿಗೆ ಆಹಾರ ನೀಡಲು ಸುವರ್ಣ ನ್ಯೂಸ್ ನೆರವು ಅಭಿಯಾನ ನಡೆಸುತ್ತಿದೆ. ಈ ಉತ್ತರದೊಂದಿಗೆ ಕರುನಾಡು ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದಕ್ಕೆ ಸ್ಪಂದಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.
ಸುವರ್ಣ ನ್ಯೂಸ್ ಪ್ರವಾಹ ಪರಿಹಾರ ಅಭಿಯಾನಕ್ಕೆ ದಾರಿ
ಸಂತ್ರಸ್ತರಿಗೆ ನೆರವು ನೀಡಿದ್ದಾಯ್ತು, ಈಗ ಜಾನುವಾರುಗೂ ಬೇಕು ನೆರವು
ಹೌದು.. ಜಾನುವಾರುಗಳ ಹೊಟ್ಟೆ ತುಂಬಿಸುವವರು ಬೇಕಾಗಿದ್ದಾರೆ. ಇಷ್ಟು ದಿನ ಪ್ರವಾಹದಲ್ಲಿ ಸಿಲುಕಿ ಆಹಾರ ಸೇರಿದಂತೆ ದಿನ ನಿತ್ಯದ ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದ ಜನರ ನೆರವಿಗೆ ನೀವು ಸ್ಪಂದಿಸುತ್ತಿದ್ದೀರಿ. ಈಗ ಮನುಷ್ಯರಂತೆ ರಾಸುಗಳಿಗೂ ನಿಮ್ಮ ನೆರವು ಚಾಚುತ್ತಿದ್ದೇವೆ.
ಪ್ರವಾಹದಲ್ಲಿ ಸಿಲುಕಿ ಪರಿತಪಿಸುತ್ತಿರುವ ಜಾನುವಾರುಗಳಿಗೂ ಸಹ ಆಹಾರ ಒದಗಿಸಲು ಸುವರ್ಣ ನ್ಯೂಸ್ ಅಭಿಯಾನ ಆರಂಭಿಸಿದೆ. ತೀವ್ರ ಮಳೆಯಿಂದ ಬಾಗಲಕೋಟೆ, ಬೆಳಗಾವಿ ಜಿಲ್ಲೆ ಸಂಪೂರ್ಣ ನೀರಿನಿಂದ ಆವರಿಸಿದ್ದು, ಜಾನುವಾರುಗಳೂ ಆಹಾರವಿಲ್ಲದೇ ಪರದಾಡುತ್ತಿವೆ. ಈ ಹಿನ್ನೆಲೆಯಲ್ಲಿ ತಮ್ಮ ಕೈಲಾದಷ್ಟು ಬೂಸಾ, ಮೇವು ಸೇರಿಂದತೆ ಜಾನುವಾರುಗಳು ತಿನ್ನುವ ಆಹಾರ ನೆರವು ನೀಡಿ ಜಾನುವಾರುಗಳನ್ನು ಕಾಪಾಡಬೇಕಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ನಲುಗಿರುವ ಜಾನುವಾರುಗಳು ಹೊಟ್ಟೆಗೆ ಆಹಾರವಿಲ್ಲದೇ ಜನರ ಮುಖ ನೋಡುತ್ತಾ ಕಣ್ಣು ಪಿಳಿ ಪಿಳಿ ಬಿಡುತ್ತಿವೆ. ಅವುಗಳ ಮುಖ ನೋಡುತ್ತಿದ್ರೆ ಅಯೋ ಅನ್ನಿಸುತ್ತೆ.
ಬೆಂಗಳೂರಿಗರು ಜಾನುವಾರ ಆಹಾರ ಒದಗಿಸಲು ಮುಂದೆ ಬರುವ ಬೆಂಗಳೂರಿಗರು ಶಿವಾನಂದ ಸರ್ಕಲ್, ಮಲ್ಲಿಗೆ ಆಸ್ಪತ್ರೆ ಎದುರಿಗೆ ಇರುವ ನಮ್ಮ ಸುವರ್ಣ ನ್ಯೂಸ್ ಕಚೇರಿಗೆ ಬಂದು ನೀಡಬಹುದು. ಇನ್ನು ಬೇರೆ-ಬೇರೆ ಜಿಲ್ಲೆಯವರು ಆಯಾ ಜಿಲ್ಲೆಯ ನಮ್ಮ ವರದಿಗಾರರನ್ನು ಸಂಪರ್ಕಿಸಬಹುದು.