ತಮ್ಮ ಜೀವನ ಆಧಾರಿತ ಸಿನಿಮಾ ಮಾಡುವ ಅವಶ್ಯಕತೆ ಈಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳುವ ಮೂಲಕ ಅಂತಹ ಪ್ರಯತ್ನಗಳಿಗೆ ಬ್ರೇಕ್ ಹಾಕಿದ್ದಾರೆ.
ಕಲಬುರಗಿ (ಜೂ.02): ತಮ್ಮ ಜೀವನ ಆಧಾರಿತ ಸಿನಿಮಾ ಮಾಡುವ ಅವಶ್ಯಕತೆ ಈಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳುವ ಮೂಲಕ ಅಂತಹ ಪ್ರಯತ್ನಗಳಿಗೆ ಬ್ರೇಕ್ ಹಾಕಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೀವನಾಧಾರಿತ ‘ಭೂಮಿಪುತ್ರ’ ಸಿನಿಮಾ ಬೆನ್ನಲ್ಲೇ ತಮ್ಮ ಬದುಕನ್ನಾಧರಿಸಿದ ಸಿನಿಮಾ ನಿರ್ಮಾಣದ ಸುದ್ದಿ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ ಅವರು, ಅನೇಕರು ಬಂದು ಸಿನಿಮಾ ಮಾಡುವುದಾಗಿ ಕೇಳಿದ್ದಾರೆ, ಅನೇಕರು ಸಿನಿಮಾಕ್ಕಾಗಿ ಒತ್ತಾಯಿಸಿದ್ದಾರೆ. ಆದರೆ ಅವರಾರಿಗೂ ತಾವು ಅನುಮತಿ ನೀಡಿಲ್ಲ ಎಂದರು. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಎಲ್ಲರೂ ಅದನ್ನು ಎದುರಿಸುವ ವಿಚಾರದಲ್ಲಿ ಗಮನ ಹರಿಸಬೇಕಿದೆ ಎಂದು ಹೇಳಿದರು.
ಸಿನಿಮಾ ಮಾಡೋಣ, ನಿಮ್ಮ ಬದುಕು ಸಿನಿಮಾನದಲ್ಲಿ ದಾಖಲೆಯಾಗಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಆದರೆ ನನ್ನದೇನಿದ್ದರೂ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದೇ ಆಗಿದೆಯೇ ವಿನಃ ಅನ್ಯ ಗುರಿಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.