ಅಧಿಕಾರಿಗಳ ವಿರುದ್ಧ ಕಿರಣ್ ಬೇಡಿ ಗರಂ

By Suvarna Web DeskFirst Published Jun 2, 2017, 8:36 PM IST
Highlights

ಮೂರುಖಾಸಗಿಕಾಲೇಜುಹಾಗೂ4 ವಿಶ್ವವಿದ್ಯಾಲಯದಿಂದಮಾನ್ಯತೆಪಡೆದ4 ಸಂಸ್ಥೆಗಳಲ್ಲಿಸ್ನಾತಕ್ಕೋತ್ತರವೈದ್ಯಕೀಯಕೋರ್ಸ್'ಗೆಂದೇಸರ್ಕಾರಿಕೋಟಾದಡಿ159 ಸೀಟುಗಳುಸೇರಿದಂತೆಒಟ್ಟು314 ಸೀಟುಗಳನ್ನುಮೀಸಲಿರಿಸಿದ್ದಾರೆ. ಆದರೆ,7ಸಂಸ್ಥೆಗಳುಕೇವಲ88 ವಿದ್ಯಾರ್ಥಿಗಳಿಗಷ್ಟೇಸರ್ಕಾರಿಕೋಟಾದಡಿಸೀಟುನೀಡುತ್ತಿದ್ದು, ಉಳಿದ71ಸೀಟುಗಳನ್ನುಒಂದನೇಹಾಗೂಎರಡನೇಸುತ್ತಿನಕೌನ್ಸೆಲಿಂಗ್ಬಳಿಕಮ್ಯಾನೇಜ್ಮೆಂಟ್ಕೋಟಾದಡಿನೀಡಿವೆಎಂದ ಅವರುಮೂರನೇಸುತ್ತಿನಕೌನ್ಸಿಲಿಂಗ್ನಡೆಸದೇವಿದ್ಯಾರ್ಥಿಗಳಿಗೆಅನ್ಯಾಯಎಸಗಿವೆಎಂದುಕಿಡಿಕಾರಿದರು.

ಪುದುಚೆರಿ(ಜೂ.02): ಮೆಡಿಕಲ್ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಹಂಚದೇ, ಮ್ಯಾನೇಜ್ಮೆಂಟ್ ಕೋಟಾಗೆ ವರ್ಗಾಯಿಸಿದ್ದ ಪ್ರಕರಣವನ್ನು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪತ್ತೆ ಹಚ್ಚಿದ್ದಾರೆ.

ಮೇ 30ರಂದು ಕೇಂದ್ರೀಕೃತ ಪ್ರವೇಶ ಸಮಿತಿ ನಡೆಸುತ್ತಿದ್ದ ಕೌನ್ಸಿಲಿಂಗ್ ವೇಳೆ ದಿಢೀರನೆ ಭೇಟಿ ನೀಡಿದ ಕಿರಣ್​ ಬೇಡಿ, ಸೀಟು ಹಂಚಿಕೆಯಲ್ಲಿನ ಅಕ್ರಮ ಪತ್ತೆ ಹಚ್ಚಿದ್ದರು. ಮೂರು ಖಾಸಗಿ ಕಾಲೇಜು ಹಾಗೂ 4 ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ 4 ಸಂಸ್ಥೆಗಳಲ್ಲಿ ಸ್ನಾತಕ್ಕೋತ್ತರ ವೈದ್ಯಕೀಯ ಕೋರ್ಸ್'ಗೆಂದೇ ಸರ್ಕಾರಿ ಕೋಟಾದಡಿ 159 ಸೀಟುಗಳು ಸೇರಿದಂತೆ ಒಟ್ಟು 314 ಸೀಟುಗಳನ್ನು ಮೀಸಲಿರಿಸಿದ್ದಾರೆ. ಆದರೆ, 7 ಸಂಸ್ಥೆಗಳು ಕೇವಲ 88 ವಿದ್ಯಾರ್ಥಿಗಳಿಗಷ್ಟೇ ಸರ್ಕಾರಿ ಕೋಟಾದಡಿ ಸೀಟು ನೀಡುತ್ತಿದ್ದು, ಉಳಿದ 71 ಸೀಟುಗಳನ್ನು ಒಂದನೇ ಹಾಗೂ ಎರಡನೇ ಸುತ್ತಿನ ಕೌನ್ಸೆಲಿಂಗ್ ಬಳಿಕ ಮ್ಯಾನೇಜ್ಮೆಂಟ್ ಕೋಟಾದಡಿ ನೀಡಿವೆ ಎಂದ ಅವರು ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿವೆ ಎಂದು ಕಿಡಿಕಾರಿದರು.

ಈ ಕುರಿತು ನೂರಾರು ಮಂದಿ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ, ಕೇಂದ್ರೀಯ ಪ್ರವೇಶ ಸಮಿತಿ ಕಚೇರಿಗೆ ಧಾವಿಸಿದ ಕಿರಣ್​ ಬೇಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಸರ್ಕಾರಿ ಸೀಟುಗಳನ್ನು ಮ್ಯಾನೇಜ್ಮೆಂಟ್ ಕೋಟಾದಡಿ ಖಾಸಗಿ ಕಾಲೇಜು ಸಂಸ್ಥೆಗಳಿಗೆ ನೀಡದೇ ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸಿ, ಎಲ್ಲ ಸರ್ಕಾರಿ ಸೀಟುಗಳನ್ನು ಹಂಚುವಂತೆ ಆದೇಶಿಸಿದರು.

click me!